ದೇಶಕ್ಕಾಗಿ ದೇವರೇ ನನ್ನ ಜೀವ ಕಾಪಾಡಿದ: ಟ್ರಂಪ್‌

| Published : Nov 06 2024, 11:57 PM IST

ದೇಶಕ್ಕಾಗಿ ದೇವರೇ ನನ್ನ ಜೀವ ಕಾಪಾಡಿದ: ಟ್ರಂಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌, ದೇವರು ಒಂದು ಕಾರಣಕ್ಕಾಗಿ ನನ್ನ ಜೀವ ಕಾಪಾಡಿದ ಎಂದು ಸ್ಮರಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌, ದೇವರು ಒಂದು ಕಾರಣಕ್ಕಾಗಿ ನನ್ನ ಜೀವ ಕಾಪಾಡಿದ ಎಂದು ಸ್ಮರಿಸಿದ್ದಾರೆ.

ಗೆಲುವಿನ ಬೆನ್ನಲ್ಲೇ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ಜು.13ರಂದು ವ್ಯಕ್ತಿಯೊಬ್ಬ ತಮ್ಮ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ನೆನಪಿಸಿಕೊಂಡು, ’ದೇವರು ನನ್ನ ಜೀವ ಕಾಪಾಡಿದ. ಅದು ಒಂದು ಉದ್ದೇಶಕ್ಕಾಗಿ (ಚುನಾವಣೆಯಲ್ಲಿ ಗೆದ್ದು ದೇಶ ಸೇವೆ ಮಾಡುವುದಕ್ಕಾಗಿ) ಎಂದು ಸ್ಮರಿಸಿದರು.

ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಅದೃಷ್ಟವಶಾತ್‌ ಅವರ ತಲೆಗೆ ತಾಗದೇ ಕಿವಿಗೆ ತಗುಲಿತ್ತು. ಹೀಗಾಗಿ ಟ್ರಂಪ್‌ ಜೀವ ಉಳಿದಿತ್ತು.

==

ಟ್ರಂಪ್‌ ಗೆಲುವಿನಲ್ಲಿ ಮಸ್ಕ್ ಪ್ರಮುಖ ಪಾತ್ರ

ನವದೆಹಲಿ: ಡೊನಾಲ್ಡ್‌ ಟ್ರಂಪ್‌ ಅವರ ಗೆಲುವಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಅವರ ಪಾತ್ರ ಪ್ರಮುಖವಾದದ್ದು. ಮಸ್ಕ್‌, ಟ್ರಂಪ್‌ ಅವರ ಚುನಾವಣಾ ಪ್ರಚಾರ ನಿಧಿಗೆ 63.30 ಕೋಟಿ ರು. ದೇಣಿಗೆ ನೀಡುವ ಮೂಲಕ ಬೆಂಬಲಿಸಿದ್ದರು.ತಮ್ಮ ಎಕ್ಸ್‌ ಖಾತೆಯಲ್ಲಿ ಟ್ರಂಪ್‌ ಪರ ಪೋಸ್ಟ್‌ಗಳನ್ನು ಹಾಕುತ್ತಾ, ಅವರ ಪರ ಪ್ರಚಾರ ಮಾಡುತ್ತಿದ್ದರು. ಜತೆಗೆ ಹಲವಾರು ಸಂವಾದಗಳಲ್ಲಿಯೂ ಪಾಲ್ಗೊಂಡು ಟ್ರಂಪ್ ಪರ ಬ್ಯಾಟ್‌ ಬೀಸಿದ್ದರು.

ಈ ಎಲ್ಲಾ ಕಾರ್ಯಗಳನ್ನು ನೆನೆದ ಟ್ರಂಪ್‌, ತಮ್ಮ ವಿಜಯ ಭಾಷಣದಲ್ಲಿ ‘ಮಸ್ಕ್‌ ಒಬ್ಬ ಅದ್ಭುತ ವ್ಯಕ್ತಿ. ಆತ ನನ್ನನ್ನು ಗೆಲ್ಲಿಸಲು ಶ್ರಮಿಸಿದ್ದಾನೆ. ಆದ್ದರಿಂದಲೇ ಆತನನ್ನು ನಾನು ಪ್ರೀತಿಸುತ್ತೇನೆ’ ಎಂದು ಹೇಳುವ ಮೂಲಕ ಮಸ್ಕ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.