ನಿಷೇಧದ ಹಿನ್ನೆಲೆ ಹೊಸ ಪಕ್ಷ ಸ್ಥಾಪಿಸಿ ಕಣಕ್ಕಿಳಿದ ಉಗ್ರ ಹಫೀಜ್‌ ಬಂಟರು

| Published : Feb 06 2024, 01:32 AM IST

ನಿಷೇಧದ ಹಿನ್ನೆಲೆ ಹೊಸ ಪಕ್ಷ ಸ್ಥಾಪಿಸಿ ಕಣಕ್ಕಿಳಿದ ಉಗ್ರ ಹಫೀಜ್‌ ಬಂಟರು
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ಚುನಾವಣೆಗೆ ಉಗ್ರ ಹಫೀಜ಼್ ಅವರ ಬಂಟರು ಹೊಸ ಹೆಸರಿನಲ್ಲಿ ರಾಜಕೀಯ ಪಕ್ಷ ನೊಂದಾಯಿಸಿ ಕಣಕ್ಕಿಳಿದಿದ್ದಾರೆ.

ಇಸ್ಲಾಮಾಬಾದ್‌: 2008ರ ಮುಂಬೈ ದಾಳಿ ಮಾಸ್ಟರ್‌ ಮೈಂಡ್‌, ಉಗ್ರ ಹಫೀಜ್‌ ಸಯೀದ್‌ನ ನಿಷೇಧಿತ ರಾಜಕೀಯ ಪಕ್ಷ ಇದೀಗ ಹೊಸ ಹೆಸರಿನೊಂದಿಗೆ ಮತ್ತೆ ಪಾಕಿಸ್ತಾನ ಚುನಾವಣೆ ಕಣಕ್ಕಿಳಿದಿದೆ.

ಲಷ್ಕರ್‌ ಉಗ್ರ ಹಫೀಜ್‌ ನೇತೃತ್ವದ ‘ಮಿಲಿ ಮುಸ್ಲಿಂ ಲೀಗ್’ ಪಕ್ಷವನ್ನು 2018ರಲ್ಲಿ ಪಾಕಿಸ್ತಾನ ಚುನಾವಣಾ ಆಯೋಗವು ನಿಷೇಧಿಸಿತು.

ಹೀಗಾಗಿ ಮತ್ತೆ ಅದೇ ಪಕ್ಷದ ನಾಯಕರು ‘ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್’ ಎಂಬ ಹೊಸ ಹೆಸರಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಉಗ್ರ ಹಫೀಜ್‌ನ ಸಂಬಂಧಿಗಳು, ನಿಷೇಧಿತ ಲಷ್ಕರ್‌ ಹಾಗೂ ‘ಜಮಾತ್- ಉದ್- ದವಾ’ದ ನಾಯಕರು ಹಾಗೂ ಅವುಗಳೊಂದಿಗೆ ನಂಟಿರುವ ವ್ಯಕ್ತಿಗಳೇ ಇದೀಗ ಪಿಎಂಎಂಎಲ್‌ ಪಕ್ಷದಿಂದ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.