ಯುದ್ಧಕ್ಕೂ ಮುನ್ನ ಶಾರ್ಟ್‌ಸೆಲ್ಲಿಂಗ್ನಡೆಸಿ ಭಾರಿ ಹಣ ಗಳಿಸಿದ ಹಮಾಸ್‌

| Published : Dec 07 2023, 01:15 AM IST

ಯುದ್ಧಕ್ಕೂ ಮುನ್ನ ಶಾರ್ಟ್‌ಸೆಲ್ಲಿಂಗ್ನಡೆಸಿ ಭಾರಿ ಹಣ ಗಳಿಸಿದ ಹಮಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಹಮಾಸ್‌ ಉಗ್ರರು ಷೇರು ಮಾರುಕಟ್ಟೆಯಲ್ಲಿ ಶಾರ್ಟ್‌ಸೆಲ್ಲಿಂಗ್‌ (ಷೇರುಪೇಟೆ ಸೂಚ್ಯಂಕ ಇಳಿವ ನಿರೀಕ್ಷೆಯಲ್ಲಿ ನಡೆಸುವ ಖರೀದಿ) ನಡೆಸುವ ಮೂಲಕ ಕೋಟ್ಯಂತರ ರು. ಗಳಿಕೆ ಮಾಡಿಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಟೆಲ್‌ಅವಿವ್‌: ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಹಮಾಸ್‌ ಉಗ್ರರು ಷೇರು ಮಾರುಕಟ್ಟೆಯಲ್ಲಿ ಶಾರ್ಟ್‌ಸೆಲ್ಲಿಂಗ್‌ (ಷೇರುಪೇಟೆ ಸೂಚ್ಯಂಕ ಇಳಿವ ನಿರೀಕ್ಷೆಯಲ್ಲಿ ನಡೆಸುವ ಖರೀದಿ) ನಡೆಸುವ ಮೂಲಕ ಕೋಟ್ಯಂತರ ರು. ಗಳಿಕೆ ಮಾಡಿಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಯುದ್ಧ ಆರಂಭವಾಗುವುದಕ್ಕೂ ಮುನ್ನ ಇಸ್ರೇಲ್ ಷೇರುಮಾರುಕಟ್ಟೆಯಲ್ಲಿ ಭಾರಿ ವ್ಯವಹಾರ ನಡೆದಿರುವುದು ದಾಖಲಾಗಿದೆ. ಹೀಗಾಗಿ ದಾಳಿ ನಡೆಯುತ್ತದೆ ಎಂಬ ಮುನ್ಸೂಚನೆ ಹಲವರಿಗೆ ಸಿಕ್ಕಿತ್ತು. ಹೀಗಾಗಿಯೇ ದಾಳಿ ನಡೆಯುವ 5 ದಿನ ಮೊದಲೇ ಶಾರ್ಟ್‌ ಸೆಲ್ಲಿಂಗ್‌ ಆರಂಭವಾಗಿತ್ತು ಎಂದು ಈ ವರದಿ ತಿಳಿಸಿದೆ. ‘ಮುಂದಿನ ದಿನಗಳಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಟ್ರೇಡರ್‌ಗಳಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬುದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಶಾರ್ಟ್‌ ಸೆಲ್ಲಿಂಗ್‌ ನಡೆಸಿ ಹಲವರು ಲಾಭ ಮಾಡಿಕೊಂಡಿದ್ದಾರೆ’ ಎಂದು ವರದಿಯ ಲೇಖಕರೊಬ್ಬರು ಹೇಳಿದ್ದಾರೆ.