ಸಾರಾಂಶ
ಹಮಾಸ್ ಸಹಕಾರಕ್ಕೆ ಕೆಚ್ಚೆದೆಯ ಪಾಕಿಸ್ತಾನ ನಿಲ್ಲಬೇಕು: ಹನಿಯೆ
ಅ.7ರ ಕೃತ್ಯವನ್ನು ಆತ್ಮರಕ್ಷಣೆಯ ಪ್ರತೀಕ: ಹಮಾಸ್ ನಾಯಕನ ಬಣ್ಣನೆಇಸ್ರೇಲ್ ತಮ್ಮನ್ನು ಸರ್ವನಾಶ ಮಾಡಲು ಉದ್ದೇಶಿಸಿದೆ ಎಂದು ಆರೋಪಇಸ್ಲಾಮಾಬಾದ್: ಇಸ್ರೇಲ್ ಜೊತೆಗಿನ ಕಾದಾಟದಲ್ಲಿ ಕೆಚ್ಚದೆಯ ಪಾಕಿಸ್ತಾನ ಹಮಾಸ್ ಸಂಘಟನೆಗೆ ಸಹಕಾರ ನೀಡಬೇಕು ಎಂದು ಹಮಾಸ್ ಉಗ್ರ ನಾಯಕ ಇಸ್ಮಾಯಿಲ್ ಹನಿಯೆ ಕರೆ ನೀಡಿದ್ದಾನೆ.ಮಜ್ಲಿಸ್ ಇತಿಹಾದ್ ಸಂಘಟನೆ ಏರ್ಪಡಿಸಿದ್ದ ಇಸ್ಲಾಂ ಧಾರ್ಮಿಕ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಆತ, ‘ಪಾಕಿಸ್ತಾನ ಇಸ್ರೇಲ್ ವಿರುದ್ಧ ಪ್ರತಿರೋಧ ಒಡ್ಡಿದರೆ ಅದರ ಕ್ರೌರ್ಯ ನಿಲ್ಲಲಿದೆ. ಹಾಗಾಗಿ ಮುಜಾಹಿದ್ದೀನ್ (ಕುರಾನ್ ಗ್ರಂಥದ ಅನುಸಾರ ಜೀವನ ನಿಯಮ ಅನುಸರಿಸುವವ) ರಾಷ್ಟ್ರವಾಗಿರುವ ಪಾಕಿಸ್ತಾನ ನಮ್ಮ ಸಹಕಾರಕ್ಕೆ ನಿಲ್ಲಬೇಕು. ಇಲ್ಲದಿದ್ದರೆ ಇಸ್ರೇಲ್ ನಮ್ಮನ್ನು ಸರ್ವನಾಶ ಮಾಡುವ ಉದ್ದೇಶಕ್ಕೆ ಬಲಿಯಾಗಬೇಕಾಗುತ್ತದೆ. ಅ.7ರಂದು ನಾವು ಇಸ್ರೇಲ್ ಮೇಲೆ 16,000 ಪ್ಯಾಲೆಸ್ತೀನಿಯರ ಅಕ್ರಮ ಬಂಧನದ ವಿರುದ್ಧ ಆತ್ಮರಕ್ಷಣೆಗಾಗಿ ದಾಳಿ ನಡೆಸಿದ ಮಾತ್ರಕ್ಕೆ ನಮ್ಮ ವಿರುದ್ಧ ಇಸ್ರೇಲ್ ಮುಗಿಬಿದ್ದಿದೆ’ ಎಂದು ಕಿಡಿಕಾರಿದ.ಇದೇ ವೇಳೆ ಯಹೂದಿಗಳು ಮುಸ್ಲಿಮರ ದೊಡ್ಡ ಶತ್ರುಗಳಾಗಿದ್ದು, ಅವರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಎದುರಿಸಲು ಸಹಕಾರ ನೀಡುವಂತೆ ಕೋರಿದ.