ಸಾರಾಂಶ
‘ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಅಥವಾ ಚುನಾವಣಾ ಆಯೋಗಕ್ಕಾಗಲಿ ಹೆದರುವುದಿಲ್ಲ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗುಡುಗಿದ್ದಾರೆ.
ನವದೆಹಲಿ : ‘ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಅಥವಾ ಚುನಾವಣಾ ಆಯೋಗಕ್ಕಾಗಲಿ ಹೆದರುವುದಿಲ್ಲ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗುಡುಗಿದ್ದಾರೆ. ಇದೇ ವೇಳೆ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯು ಮತಗಳವಿಗೆ ಹೊಸ ಆಯುಧ ಎಂದು ಕಿಡಿಕಾರಿದ್ದಾರೆ.
ಬಿಹಾರದಲ್ಲಿ ವೋಟ್ ಅಧಿಕಾರ್ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು 2ನೇ ದಿನದಂದು ಮತಪಟ್ಟಿಯಿಂದ ಹೆಸರು ಅಳಸಿಹೋಗಿರುವವರ ಜೊತೆ ಸಂವಾದ ನಡೆಸಿದರು. ‘ಈ ಜನರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ ಈಗ ಅವರ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿದೆ. ಇದು ಮತಗಳವಿಗೆ ನೇರ ಉದಾಹರಣೆ ಎಂದರು. ಬಿಜೆಪಿ ಮತ್ತು ಆಯೋಗದ ಮೈತ್ರಿಯು ಬಹುಜನರು ಮತ್ತು ಬಡವರನ್ನು ಶಿಕ್ಷಿಸುತ್ತಿದೆ ಎಂದು ಆರೋಪಿಸಿದರು. ಜೊತೆಗೆ 2023ರಲ್ಲಿ ಮೋದಿ ಸರ್ಕಾರವು ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗದಂತಹ ಕಾನೂನು ತಂದಿದೆ ಎಂದು ದೂರಿದರು.
ಬಳಿಕ ಔರಂಗಬಾದ್‌ನಲ್ಲಿಯೂ ಸಹ ಮತಪಟ್ಟಿಯಿಂದ ಹೆಸರು ಕಾಣೆಯಾಗಿರುವವರ ಜೊತೆಗೆ ಸಂವಾದ ನಡೆಸಿದರು.