ಸಾರಾಂಶ
ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಾಯುಪಡೆಗೆ 8 ನಿವೃತ್ತಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಭೇಟಿ ಮಾಡಿದ್ದಾರೆ.
ಮಾಜಿ ಯೋಧರ ಜತೆ ಭಾರತೀಯ ದೂತರ ಭೇಟಿ
ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಾಯುಪಡೆಗೆ 8 ನಿವೃತ್ತಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಭೇಟಿ ಮಾಡಿದ್ದಾರೆ.ಈ ಕುರಿತು ಗುರುವಾರ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ, ‘ಕತಾರ್ ಜೈಲಿನಲ್ಲಿರುವ 8 ಭಾರತೀಯರನ್ನು ಭೇಟಿ ಮಾಡುವ ಅವಕಾಶವನ್ನು ಅಲ್ಲಿನ ನಮ್ಮ ರಾಯಭಾರ ಸಿಬ್ಬಂದಿಗೆ ಡಿ.3ರಂದು ಒದಗಿಸಲಾಗಿತ್ತು’ ಎಂದು ತಿಳಿಸಿದ್ದಾರೆ.ಇದೇ ವೇಳೆ ಗಲ್ಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಕುರಿತು ಪ್ರತಿಕ್ರಿಯಿಸಿದ ಬಗ್ಚಿ, ‘ಮೇಲ್ಮನವಿ ಕುರಿತು ನ.23 ಮತ್ತು ನ.30ರಂದು ಎರಡು ವಿಚಾರಣೆ ನಡೆದಿದೆ. ನ್ಯಾಯಾಲಯದ ಎಲ್ಲಾ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತೀಯರಿಗೆ ಎಲ್ಲಾ ಕಾನೂನು ಮತ್ತು ರಾಯಭಾರ ನೆರವು ಒದಗಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.ಕತಾರ್‌ನ ಯೋಧರಿಗೆ ತರಬೇತಿ ಸೇರಿದಂತೆ ಸೇನೆಗೆ ವಿವಿಧ ರೀತಿಯ ಸೇವೆ ನೀಡುವ ಕಂಪನಿಯೊಂದರಲ್ಲಿ 8 ಭಾರತೀಯರು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಇಟಲಿಯ ರಹಸ್ಯ ತಂತ್ರಜ್ಞಾನ ಒಳಗೊಂಡ ಸಬ್‌ಮರೀನ್‌ನ ಮಾಹಿತಿಯನ್ನು ಇವರು ಇಸ್ರೇಲ್ ಜೊತೆಗೆ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಕತಾರ್ ಕೋರ್ಟ್ 8 ಜನರಿಗೆ ಗಲ್ಲು ಶಿಕ್ಷೆ ವಿಧಿಸಿದೆ.