ಸಾರಾಂಶ
ಗಾಜಾದ ಶಿಫಾ ಆಸ್ಪತ್ರೆಯಲ್ಲಿದ್ದ ಅವಧಿ ಪೂರ್ವವಾಗಿ ಜನಿಸಿದ್ದ 30 ನವಜಾತ ಶಿಶುಗಳನ್ನು ನೆರೆಯ ಈಜಿಪ್ಟ್‌ಗೆ ಸ್ಥಳಾಂತರಿಸಲಾಗುವುದು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ
ಖಾನ್ ಯೂನಿಸ್: ಗಾಜಾದ ಶಿಫಾ ಆಸ್ಪತ್ರೆಯಲ್ಲಿದ್ದ ಅವಧಿ ಪೂರ್ವವಾಗಿ ಜನಿಸಿದ್ದ 30 ನವಜಾತ ಶಿಶುಗಳನ್ನು ನೆರೆಯ ಈಜಿಪ್ಟ್‌ಗೆ ಸ್ಥಳಾಂತರಿಸಲಾಗುವುದು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ತನ್ನ ಭೀಕರ ದಾಳಿ ಆರಂಭಿಸಿದಾಗಿನಿಂದ ಗಾಜಾದ ಆಸ್ಪತ್ರೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಜನರೇಟರ್‌ಗಳಿಗೂ ಇಂಧನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಅವಧಿಪೂರ್ವವಾಗಿ ಜನಿಸಿದ ಮಕ್ಕಳನ್ನು ಸಂರಕ್ಷಿಸುವ ಇನ್‌ಕ್ಯುಬೇಟರ್ ಸೌಲಭ್ಯವೂ ಇಲ್ಲದಂತಾಗಿ ಶಿಶುಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ.