ಬಂಕರ್‌ನಲ್ಲಿ ಅಡಗಿ ಕುಳಿತಿರುವ ಖಮೇನಿ, ಅಲ್ಲಿಂದಲೇ ತಮ್ಮ ಉತ್ತರಾಧಿಕಾರಿಯಾಗಲು 3 ಜನರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. ಇವರಲ್ಲಿ ಕೊನೆಯದಾಗಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಟೆಹ್ರಾನ್‌: ‘ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದಲೇ ಸಂಘರ್ಷ ಅಂತ್ಯವಾಗುತ್ತದೆ’ ಎಂಬ ಇಸ್ರೇಲ್‌ ಆರ್ಭಟಿಸುತ್ತಿರುವ ನಡುವೆಯೇ, ಬಂಕರ್‌ನಲ್ಲಿ ಅಡಗಿ ಕುಳಿತಿರುವ ಖಮೇನಿ, ಅಲ್ಲಿಂದಲೇ ತಮ್ಮ ಉತ್ತರಾಧಿಕಾರಿಯಾಗಲು 3 ಜನರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. ಇವರಲ್ಲಿ ಕೊನೆಯದಾಗಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

ಇರಾನ್‌ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ಈ ಬಗ್ಗೆ ವರದಿ ಮಾಡಿದೆ, ತಾವು ಇಸ್ರೇಲ್‌ ಅಥವಾ ಅಮೆರಿಕದ ದಾಳಿಗೆ ಬಲಿಯಾಗಬಹುದು ಎಂದು ಖಮೇನಿಗೆ ತಿಳಿದಿದ್ದು, ಅಂತಹ ಸಾವನ್ನು ಅವರು ‘ಹುತಾತ್ಮತೆ’ ಎಂದು ನಂಬುತ್ತಾರೆ ಎನ್ನಲಾಗಿದೆ. ಆದ್ದರಿಂದಲೇ ತಮ್ಮ ಉತ್ತರಾಧಿಕಾರಿಯ ನೇಮಕಕ್ಕೆ ಮುಂದಾಗಿದ್ದಾರೆ. ಅವು ಈಗಾಗಲೇ 3 ಹೆಸರುಗಳನ್ನು ಅಂತಿಮ ಆಯ್ಕೆಗಾಗಿ ತಜ್ಞರಿಗೆ ಕಳಿಸಿದ್ದಾರೆ. ಆದರೆ ತಮ್ಮ ಹುದ್ದೆಗೆ ಪುತ್ರ ಮೊಜ್ತಬಾನನ್ನು ಪರಿಗಣಿಸಿಲ್ಲ ಎಂಬುದು ಗಮನಾರ್ಹ.

ಇಸ್ರೇಲ್‌ ದಾಳಿಗೆ ಬಲಿಯಾಗಿರುವ ಇರಾನ್‌ನ ಹಿರಿಯ ಸೇನಾಧಿಕಾರಿಗಳ ಹುದ್ದೆಗೂ ಖಮೇನಿ ಬಂಕರ್‌ನಿಂದಲೇ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಆಯ್ಕೆ ಏಕೆ?

ಖಮೇನಿ ನಿರ್ನಾಮ ನಮ್ಮ ಯುದ್ಧದ ಗುರಿ ಎಂದು ಇಸ್ರೇಲ್‌ ಘೋಷಣೆ

ಇದು ತಮ್ಮ ಹತ್ಯೆಗೆ ಇಸ್ರೇಲ್‌ ಸಿದ್ಧತೆ ನಡೆಸಿದೆ ಎಂದು ಖಮೇನಿಗೆ ಭೀತಿ

ಹೀಗಾಗಿ ಉತ್ತರಾಧಿಕಾರಿ ಆಯ್ಕೆಯಾಗಿ ಖಮೇನಿಯಿಂದ ಮೂರು ಹೆಸರು