ಮೋದಿ ಅವರ ಕ್ಷಮೆ ಕೇಳಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷಗಳ ಆಗ್ರಹ

| Published : Jan 31 2024, 02:20 AM IST

ಮೋದಿ ಅವರ ಕ್ಷಮೆ ಕೇಳಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷಗಳ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆಯಾಚಿಸುವಂತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರಿಗೆ ಮಾಲ್ಡೀವ್ಸ್‌ನ ಜಾಮ್ಹೂರಿ ಪಕ್ಷ ಆಗ್ರಹಿಸಿದೆ.

ಮಾಲೆ: ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರೋಧಿ ನಿಲುವು ತಾಳುತ್ತಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು಼ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ‘ಮುಯಿಜು಼ ಭಾರತ ಮತ್ತು ಅದರ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚಿಸಬೇಕು’ ಎಂದು ಮಾಲ್ಡೀವ್ಸ್‌ ಪ್ರತಿಪಕ್ಷವಾಗಿರುವ ಜಮ್ಹೂರಿ ಪಕ್ಷ ಆಗ್ರಹಿಸಿದೆ.

ಮಂಗಳವಾರ ಮಾತನಾಡಿದ ವಿಪಕ್ಷ ನಾಯಕ ಗೌಸಿಂ ಇಬ್ರಾಹಿಂ, ‘ಈವರೆಗೆ ಮಾಡಿದ ಪ್ರಮಾದಕ್ಕಾಗಿ ಮೋದಿ ಅವರಲ್ಲಿ ಮುಯಿಜು ಕ್ಷಮೆ ಯಾಚಿಸಬೇಕು ಹಾಗೂ ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಗೆ ಕೋರಬೇಕು’ ಎಂದು ಆಗ್ರಹಿಸಿದರು.

ಮಯಿಜು ಪ್ರವಾಸೋದ್ಯಮ ವಿಚಾರದಲ್ಲಿ ಭಾರತ ವಿರೋಧಿ ನಿಲುವು ತಾಳಿದ್ದಾರೆ ಹಾಗೂ ಭಾರತದ ಸೇನೆಗೆ ಮಾಲ್ಡೀವ್ಸ್‌ ತೊರೆಯುವಂತೆ ಸೂಚನೆ ನೀಡಿದ್ದಾರೆ. ಇದು ಮಾಲ್ಡೀವ್ಸ್‌ ವಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.

ಸೋಮವಾರವಷ್ಟೇ ಮಾಲ್ಡೀವ್ಸ್‌ನ ಪ್ರಮುಖ ಪ್ರತಿಪಕ್ಷವಾಗಿರುವ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿಯು ಮೊಹಮ್ಮದ್‌ ಮುಯಿಜು಼ ಅವರ ವಾಗ್ದಂಡನೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿತ್ತು.