ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಬೈಡೆನ್‌ ದಂಪತಿಗೆ ಭಾರತೀಯ ಕಲೆಗಳನ್ನು ಪ್ರತಿನಿಧಿಸುವ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಬೆಳ್ಳಿಯ ರೈಲು ಮತ್ತು ಪಾಶ್ಮೀನ ಶಾಲು ಉಡುಗೊರೆಗಳಲ್ಲಿ ಸೇರಿವೆ.

ವಾಷಿಂಗ್ಟನ್‌: ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಫಿಲಿಡೆಲ್ಪಿಯಾದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮತ್ತು ಅವರ ಪತ್ನಿ ಜಿಲ್‌ ಬೈಡೆನ್‌ ಅವರಿಗೆ ಭಾರತದ ಸಾಂಪ್ರದಾಯಿಕ ಕಲೆಗಳನ್ನು ಪರಿಚಯಿಸುವ ಉಡುಗೊರೆ ನೀಡಿದ್ದಾರೆ.

ಬೈಡೆನ್‌ ಅವರಿಗೆ ಮಹಾರಾಷ್ಟ್ರದ ಕಲಾಕಾರರು, ಕೈಯಲ್ಲಿ ಕೆತ್ತಿದ ಬೆಳ್ಳಿಯ ರೈಲನ್ನು ಉಡುಗೊರೆಯಾಗಿ ನೀಡಿದರು. ರೈಲಿನ ಮೇಲೆ ದೆಹಲಿ- ಡೆಲಾವರೆ ಮತ್ತು ಇಂಡಿಯನ್‌ ರೈಲ್ವೇಸ್‌ ಎಂದು ಕೆತ್ತಲಾಗಿದೆ. ಇನ್ನು ಜಿಲ್‌ ಅವರಿಗೆ ಕಾಶ್ಮೀರದ ವಿಶ್ವವಿಖ್ಯಾತ ಪಾಶ್ಮೀನ ಶಾಲನ್ನು ಉಡುಗೊರೆಯಾಗಿ ನೀಡಿದರು.