ಸಾರಾಂಶ
18 ತಿಂಗಳಲ್ಲಿ ನಾಲ್ಕನೇ ಬಾರಿಗೆ ವಿಶ್ವಾಸಮತ ನಡೆದರೂ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ಯಶಸ್ವಿಯಾಗಿದ್ದಾರೆ.
ಕಾಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ, ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅದರೊಂದಿಗೆ ಕಳೆದ 18 ತಿಂಗಳಲ್ಲಿ ಪ್ರಚಂಡ ನಾಲ್ಕನೇ ಬಾರಿ ವಿಶ್ವಾಸಮತ ಗೆದ್ದಂತೆ ಆಗಿದೆ.
ಮೈತ್ರಿಪಕ್ಷವಾಗಿದ್ದ ಜನತಾ ಸಮಾಜಬದಿ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ, ಸರ್ಕಾರದ ಬಲವನ್ನು ಸಾಬೀತುಪಡಿಸಲು ಪ್ರಚಂಡ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರು.
ಈ ವೇಳೆ 275 ಸದಸ್ಯ ಬಲದ ಸಂಸತ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿಯ ನಾಯಕ ಪ್ರಚಂಡ 157 ಮತ ಪಡೆದು ವಿಶ್ವಾಸಮತ ಗೆದ್ದಿದ್ದಾರೆ. ವಿಪಕ್ಷ ನೇಪಾಳಿ ಕಾಂಗ್ರೆಸ್ ಮತದಾನ ಬಹಿಷ್ಕರಿಸಿತ್ತು.