ಸಾರಾಂಶ
ಉಕ್ರೇನ್‌ನ ಜೊತೆ ಯುದ್ಧದಲ್ಲಿರುವ ರಷ್ಯಾ ತನ್ನ ರಕ್ಷಣಾ ವೆಚ್ಚವನ್ನು ಭರಿಸಿಕೊಳ್ಳಲು ಬಜೆಟ್‌ನಲ್ಲಿ ದಾಖಲೆಯ 13.5 ಲಕ್ಷ ಕೋಟಿ ರುಬೆಲ್ (12.18 ಲಕ್ಷ ಕೋಟಿ ರು.) ನಿಗದಿಪಡಿಸಿದೆ.
ಕೀವ್: ಉಕ್ರೇನ್‌ನ ಜೊತೆ ಯುದ್ಧದಲ್ಲಿರುವ ರಷ್ಯಾ ತನ್ನ ರಕ್ಷಣಾ ವೆಚ್ಚವನ್ನು ಭರಿಸಿಕೊಳ್ಳಲು ಬಜೆಟ್‌ನಲ್ಲಿ ದಾಖಲೆಯ 13.5 ಲಕ್ಷ ಕೋಟಿ ರುಬೆಲ್ (12.18 ಲಕ್ಷ ಕೋಟಿ ರು.) ನಿಗದಿಪಡಿಸಿದೆ.
ಇದು ಒಟ್ಟು ಬಜೆಟ್‌ನಲ್ಲಿ ಶೇ.32ರಷ್ಟು ಪಾಲನ್ನು ಹೊಂದಿದ್ದು, ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ವರ್ಷ ಶೇ.4ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂಗೀಕಾರ ನೀಡಿದ್ದಾರೆ.
ಮತ್ತೊಂದೆಡೆ 2022ರ ಫೆಬ್ರವರಿಯಿಂದ ಆರಂಭವಾದ ಯುದ್ಧವನ್ನು ತೀವ್ರಗೊಳಿಸಿರುವ ರಷ್ಯಾ ಭಾನುವಾರ ದಕ್ಷಿಣ ಉಕ್ರೇನ್‌ನ ಖೆರ್ಸೋನ್ ನಗರದ ಮೇಲೆ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ 7 ಜನರು ಮೃತಪಟ್ಟು, 7ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಶನಿವಾರವೂ ಸಹ 4 ಜನರನ್ನು ರಷ್ಯಾ ಬಲಿಪಡೆದಿತ್ತು.