ಸಾರಾಂಶ
ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಮಾಡುವಲ್ಲಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಶಂಕಿಸುತ್ತಿರುವ ನಡುವೆಯೇ ಅಮೆರಿಕದಲ್ಲಿದ್ದ ಭಾರತದ ಗುಪ್ತಚರ ಸಂಸ್ಥೆ ರಾ ಕಚೇರಿಯನ್ನು ಅಮೆರಿಕ ಸರ್ಕಾರ ಮುಚ್ಚಿಸಲು ಸೂಚಿಸಿದೆ ಎನ್ನಲಾಗಿದೆ.
ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಮಾಡುವಲ್ಲಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಶಂಕಿಸುತ್ತಿರುವ ನಡುವೆಯೇ ಅಮೆರಿಕದಲ್ಲಿದ್ದ ಭಾರತದ ಗುಪ್ತಚರ ಸಂಸ್ಥೆ ರಾ ಕಚೇರಿಯನ್ನು ಅಮೆರಿಕ ಸರ್ಕಾರ ಮುಚ್ಚಿಸಲು ಸೂಚಿಸಿದೆ ಎನ್ನಲಾಗಿದೆ.ಇದರ ಭಾಗವಾಗಿಯೇ ಗುಪ್ತಚರ ಅಧಿಕಾರಿ ಜೂನ್ 30ರಂದೇ ನಿವೃತ್ತರಾಗಿದ್ದರೂ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲು ಅಮೆರಿಕ ಅನುಮತಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಮುಚ್ಚಿದ ಕಚೇರಿಯನ್ನು ನ್ಯೂಯಾರ್ಕ್ ನಗರದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲೂ ಸಹ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.
1968ರಲ್ಲಿ ರಾ ಆರಂಭವಾದ ಬಳಿಕ ಉತ್ತರ ಅಮೆರಿಕದಲ್ಲಿನ ತನ್ನ ಕಚೇರಿಯನ್ನು ರಾ ಮುಚ್ಚುತ್ತಿರುವುದು ಇದೇ ಮೊದಲು ಎನ್ನಲಾಗಿದೆ.