ಫ್ರಾನ್ಸ್ನಲ್ಲಿ ಅಕ್ರಮ ವಲಸಿಗರು ಜೆನ್ಝೀಗಳ ಪ್ರತಿಭಟನೆ ಹೈಜಾಕ್ ಮಾಡಿ ದೇಶವ್ಯಾಪಿ ಹಿಂಸಾಚಾರ ಮತ್ತು ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಿದಂತೆ ಇದೀಗ ಇಟಲಿಯಲ್ಲೂ ವಾಣಿಜ್ಯ ಸ್ಥಳಗಳ ದರೋಡೆ, ಲೂಟಿ ಕೃತ್ಯಗಳು ಆರಂಭವಾಗಿದೆ.
ರೋಮ್: ಫ್ರಾನ್ಸ್ನಲ್ಲಿ ಅಕ್ರಮ ವಲಸಿಗರು ಜೆನ್ಝೀಗಳ ಪ್ರತಿಭಟನೆ ಹೈಜಾಕ್ ಮಾಡಿ ದೇಶವ್ಯಾಪಿ ಹಿಂಸಾಚಾರ ಮತ್ತು ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಿದಂತೆ ಇದೀಗ ಇಟಲಿಯಲ್ಲೂ ವಾಣಿಜ್ಯ ಸ್ಥಳಗಳ ದರೋಡೆ, ಲೂಟಿ ಕೃತ್ಯಗಳು ಆರಂಭವಾಗಿದೆ. ಹೀಗಾಗಿ ಇಲ್ಲೂ ಅಕ್ರಮ ವಲಸಿಗರ ಕೈವಾಡದ ಶಂಕೆ ವ್ಯಕ್ತವಾಗಿದೆ.
ಹೆಚ್ಚುತ್ತಿರುವ ಹಣದುಬ್ಬರ, ಬೆಲೆಯೇರಿಕೆ
ಹೆಚ್ಚುತ್ತಿರುವ ಹಣದುಬ್ಬರ, ಬೆಲೆಯೇರಿಕೆ, ಶಿಕ್ಷಣ ವ್ಯವಸ್ಥೆಯ ದುಸ್ಥಿತಿ ವಿರೋಧಿಸಿ ಕಳೆದೆರಡು ದಿನಗಳಿಂದ ಇಟಲಿಯ ಜನತೆ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಸರ್ಕಾರದ ಬಲಪಂಥೀಯ ನೀತಿಗಳ ವಿರುದ್ಧ ಸಿಟ್ಟಿಗೆದ್ದ ನೂರಾರು ಮುಸುಕುಧಾರಿ ಯುವಕರು ಮಿಲಾನ್ ಸೇರಿದಂತೆ ಹಲವು ನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಿದ್ದಾರೆ.
ಕಟ್ಟಡಗಳಿಗೆ ಕಲ್ಲು ಎಸೆದು, ಬೆಂಕಿ ಹಚ್ಚಿ ದಾಂಧಲೆ
ಜೊತೆಗೆ ವಾಹನಗಳು, ಕಟ್ಟಡಗಳಿಗೆ ಕಲ್ಲು ಎಸೆದು, ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ದಂಗೆಕೋರರನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಅನಿವಾರ್ಯವಾಗಿ ಅಶ್ರುವಾಯು ಸಿಡಿಸಿ ಜಲಫಿರಂಗಿಗಳನ್ನು ಸಿಡಿಸಲಾಗಿದೆ.

