ಸಾರಾಂಶ
ಸಿಂಗಾಪುರ ಮತ್ತು ಸ್ವಿಜರ್ಲೆಂಡ್‌ನ ಜ್ಯೂರಿಚ್ ನಗರಗಳು 2023ರಲ್ಲಿ ವಿಶ್ವದಲ್ಲೇ ಅತ್ಯಂತ ದುಬಾರಿ ನಗರಗಳು ಎನಿಸಿಕೊಂಡಿವೆ
ಹಾಂಗ್‌ಕಾಂಗ್: ಸಿಂಗಾಪುರ ಮತ್ತು ಸ್ವಿಜರ್ಲೆಂಡ್‌ನ ಜ್ಯೂರಿಚ್ ನಗರಗಳು 2023ರಲ್ಲಿ ವಿಶ್ವದಲ್ಲೇ ಅತ್ಯಂತ ದುಬಾರಿ ನಗರಗಳು ಎನಿಸಿಕೊಂಡಿವೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಗುರುವಾರ ಬಿಡುಗಡೆ ಮಾಡಿದ ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಮತ್ತು ಜ್ಯೂರಿಚ್ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಜಿನೆವಾ, ನ್ಯೂಯಾರ್ಕ್, ಹಾಂಗ್ ಕಾಂಗ್, ಲಾಸ್‌ಎಂಜಲೀಸ್‌ಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಸಾಮಾನ್ಯವಾಗಿ ಜನರು ಬಳಸುವ 200ಕ್ಕೂ ಹೆಚ್ಚು ಸರಕು ಮತ್ತು ಸೇವೆಗಳ ದರ ಕಳೆದ ವರ್ಷ ಶೇ.7.4ರಷ್ಟು ಹೆಚ್ಚಾಗಿದೆ. ಅದರ ಹಿಂದಿನ ವರ್ಷ ಈ ಏರಿಕೆ ಪ್ರಮಾಣ ಶೇ.8.1ರಷ್ಟಿತ್ತು ಎಂದು ವರದಿ ತಿಳಿಸಿದೆ. ಸಿಂಗಾಪುರ ಕಳೆದ 11 ವರ್ಷಗಳಲ್ಲಿ 9 ವರ್ಷ ಮೊದಲ ಸ್ಥಾನ ಪಡೆದುಕೊಂಡಿದೆ.