ಸಾರಾಂಶ
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿ ರಾಜಿ ಮಾಡಿಸಿದ್ದು ನಾನೇ ಎಂಬ ಜಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರೆಸಿದ್ದಾರೆ. ಇದರಲ್ಲಿ ಮೂರನೇ ದೇಶದ ಪಾತ್ರವಿಲ್ಲ ಎಂದು ಭಾರತ ತಿರಸ್ಕರಿಸಿದ್ದನ್ನೂ ಲೆಕ್ಕಿಸದೆ, 36ನೇ ಬಾರಿ ಟ್ರಂಪ್ ಹೀಗೆ ಹೇಳಿದ್ದಾರೆ.
ವಾಷಿಂಗ್ಟನ್: ಭಾರತದ ಮೇಲೆ ಅಧ್ಯಕ್ಷ ಟ್ರಂಪ್ ವಿಧಿಸಿರುವ ಕಠಿಣ ಸುಂಕದ ಕುರಿತು ಅಮೆರಿಕದಲ್ಲೇ ಅಪಸ್ವರ ಎದ್ದಿದೆ. ಭಾರತವನ್ನು ರಷ್ಯಾ ಹಾಗೂ ಚೀನಾದಿಂದ ದೂರ ಇರಿಸುವ ಅಮೆರಿಕದ ದಶಕಗಳ ಪ್ರಯತ್ನಕ್ಕೆ ಟ್ರಂಪ್ ಎಳ್ಳುನೀರು ಬಿಟ್ಟಿದ್ದಾರೆ ಎಂದು ಅವರ ಮಾಜಿ ಸಹಾಯಕ ಜಾನ್ ಬಾಲ್ಟನ್ ಆಪಾದಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ರಷ್ಯಾದ ವಿರುದ್ಧವಾಗಿ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿರುವುದು ಬಹುದೊಡ್ಡ ತಪ್ಪು. ಇದು ಅಮೆರಿಕಕ್ಕೆ ಬಹಳ ಕೆಟ್ಟ ಫಲಿತಾಂಶ ನೀಡಲಿದೆ. ರಷ್ಯಾಕ್ಕೆ ಪೆಟ್ಟು ಕೊಡಬೇಕು ಎಂದು ಭಾರತದ ಮೇಲಿರುವ ತೆರಿಗೆಯು, ಭಾರತವನ್ನು ರಷ್ಯಾ ಹಾಗೂ ಚೀನಾಕ್ಕೆ ಹತ್ತಿರ ತರಬಹುದು.
ಭಾರತವನ್ನು ಈ ದೇಶಗಳಿಂದ ದೂರವಿರಿಸುವ ಅಮೆರಿಕದ ದಶಕಗಳ ಪ್ರಯತ್ನಕ್ಕೆ ಈ ನೀತಿಯಿಂದ ಸಮಸ್ಯೆಯುಂಟಾಗುತ್ತದೆ’ ಎಂದಿದ್ದಾರೆ.ಅಮೆರಿಕದ ವಿದೇಶಾಂಗ ವ್ಯವಹಾರಗಳ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ ಸಹ ಟ್ರಂಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಭಾರತ-ಅಮೆರಿಕ ನಡುವಿನ ಸಂಬಂಧಕ್ಕೆ ದೀರ್ಘಕಾಲೀನಪೆಟ್ಟು ನೀಡಬಹುದು ಎಂದಿದ್ದಾರೆ.