ಶಿಕ್ಷಣ ಇಲಾಖೆ ರದ್ದು ಪಡಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ; ರಾಜ್ಯಗಳಿಗೆ ಪವರ್‌

| N/A | Published : Mar 22 2025, 02:07 AM IST / Updated: Mar 22 2025, 04:09 AM IST

ಸಾರಾಂಶ

 ಅಧಿಕಾರಕ್ಕೆ ಏರಿದ ಬಳಿಕ ಹಲವು ವಿವಾದಿತ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಶಿಕ್ಷಣ ಇಲಾಖೆಯನ್ನೇ ರದ್ದು ಮಾಡುವ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.

ವಾಷಿಂಗ್ಟನ್‌: ಅಧಿಕಾರಕ್ಕೆ ಏರಿದ ಬಳಿಕ ಹಲವು ವಿವಾದಿತ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಶಿಕ್ಷಣ ಇಲಾಖೆಯನ್ನೇ ರದ್ದು ಮಾಡುವ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.

ಚುನಾವಣೆ ವೇಳೆ ಶಿಕ್ಷಣ ಇಲಾಖೆ ಬಂದ್‌ ಮಾಡಿ ಶಾಲಾ ನೀತಿಯನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ನೀಡುತ್ತೇನೆ ಎಂದು ನೀಡಿದ್ದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಟ್ರಂಪ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ದೇಶದ ಶಿಕ್ಷಣದಲ್ಲಿ ಅಧ್ಯಕ್ಷೀಯ ಆಡಳಿತದ ಹಸ್ತಕ್ಷೇಪ ಇರುವುದಿಲ್ಲ.

ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆರೋಲಿನ್ ಲಿವಿಟ್ ಪ್ರಕಾರ, ಪೆಲ್ ಅನುದಾನ, ವಿದ್ಯಾರ್ಥಿ ಸಾಲ, ಅಂಗವಿಕಲ ವಿದ್ಯಾರ್ಥಿಗಳಿಗೆ ಅನುದಾನ ಸೇರಿದಂತೆ ಕೆಲ ಮಹತ್ವದ ಅಧಿಕಾರಿಗಳು ಮಾತ್ರ ಅಮೆರಿಕ ಶಿಕ್ಷಣ ಇಲಾಖೆಯ ಕೈಯಲ್ಲಿರುತ್ತವೆ. ಉಳಿದಂತೆ ಸಂಪೂರ್ಣ ಅಧಿಕಾರ ರಾಜ್ಯಗಳಿಗೆ ಇರಲಿದೆ.

ಇಲಾಖೆ ಮುಚ್ಚಲು ಕಾರಣವೇನು?:

ಎಡಪಂಥೀಯರು ತಮಗೆ ಬೇಕಾದಂತೆ ಶಿಕ್ಷಣವನ್ನು ರೂಪಿಸಿದ್ದಾರೆ. ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತಿದ್ದಾರೆ. ತೃತೀಯಲಿಂಗಿ ವಿದ್ಯಾರ್ಥಿಗಳನ್ನು ಬೆಂಬಲಿಸುವ ನೀತಿಗಳನ್ನು ಸೇರಿಸಲಾಗಿದೆ. ದೊಡ್ಡ ಮಾರ್ಕ್ಸ್‌ವಾದಿ ಪಿತೂರಿಯ ಭಾಗವಾಗಿ ಸಾರ್ವಜನಿಕ ಶಿಕ್ಷಣ ನಡೆಯುತ್ತಿದೆ ಎಂದು ಟ್ರಂಪ್ ಆರೋಪಿಸುತ್ತಿದ್ದರು.