ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಮಾಲ್ಡೀವ್ಸ್‌ ಮೂಲದ ಇನ್ನಿಬ್ಬರು ಪೈಲಟ್‌ಗಳನ್ನು ಯುಎಇನಲ್ಲಿ ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿ ಭಾರತೀಯ ಪೈಲಟ್‌ಗೆ ಇರಿದಿದ್ದ ಒಮಾನ್‌ ಮೂಲದ ಸಹಪೈಲಟ್‌ ಹಮಾಮ್‌ ಜೊತೆ ನಂಟು ಹೊಂದಿದ ಶಂಕೆಯ ಮೇಲೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ನವದೆಹಲಿ: ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಮಾಲ್ಡೀವ್ಸ್‌ ಮೂಲದ ಇನ್ನಿಬ್ಬರು ಪೈಲಟ್‌ಗಳನ್ನು ಯುಎಇನಲ್ಲಿ ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿ ಭಾರತೀಯ ಪೈಲಟ್‌ಗೆ ಇರಿದಿದ್ದ ಒಮಾನ್‌ ಮೂಲದ ಸಹಪೈಲಟ್‌ ಹಮಾಮ್‌ ಜೊತೆ ನಂಟು ಹೊಂದಿದ ಶಂಕೆಯ ಮೇಲೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು

ಇವರಿಬ್ಬರು ಫ್ಲೈದುಬೈ ವಿಮಾನದ ಪೈಲಟ್‌ಗಳಾಗಿದ್ದು, ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು. ಇಸ್ರೇಲ್‌ಗೆ ಸಂಚಾರ ಕೈಗೊಂಡ ವಿಮಾನದಲ್ಲಿ ಸೇವೆ ಸಲ್ಲಿಸಿದ್ದರು. ದಾಳಿಕೋರ ಪೈಲಟ್‌ ಹಮಾಮ್‌ ಇದ್ದ ಕಟ್ಟಡದಲ್ಲೇ ಇವರಿಬ್ಬರೂ ವಾಸವಿದ್ದರು ಎನ್ನಲಾಗಿದೆ.

ಸ್ಮಿತ್‌ ಮಚ್ಛರ್‌ಗೆ ವಿಮಾನದ ಕೆಲ ಸಿಬ್ಬಂದಿ ನಿಗೂಢ ಮಾತ್ರೆ ತಿನ್ನಿಸಲು ಯತ್ನಿಸಿದ್ದರು

ಈ ನಡುವೆ ವಿಮಾನದಲ್ಲಿ ಚೂರಿ ಇರಿತದ ಬಳಿಕ ಕುಸಿದು ಬಿದ್ದಿದ್ದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಛರ್‌ಗೆ ವಿಮಾನದ ಕೆಲ ಸಿಬ್ಬಂದಿ ನಿಗೂಢ ಮಾತ್ರೆ ತಿನ್ನಿಸಲು ಯತ್ನಿಸಿದ್ದರು ಅದೇ ವಿಮಾನದ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಫ್‌ ಎಂಬ ಪ್ರಯಾಣಿಕ ‘ಆರೋಪಿ ಒಮಾನ್‌ ಪೈಲಟ್‌ಗೆ ವಿಮಾನದ ಇತರ ಸಿಬ್ಬಂದಿಗಳು ಸಹಕರಿಸುತ್ತಿದ್ದರು, ಆತನ ಮೇಲಿನ ನಿರ್ಬಂಧ ಸಡಿಲಿಸಲು ಯತ್ನಿಸಿದರು. ಪ್ರಯಾಣಿಕರು ಚಿತ್ರೀಕರಣ ಮಾಡುವುದನ್ನು ತಡೆದರು. ಗಾಯಗೊಂಡ ಭಾರತೀಯ ಪೈಲಟ್‌ ಬಾಯಿಗೆ ನಿಗೂಢ ಮಾತ್ರೆ ಹಾಕಲು ಪ್ರಯತ್ನಿಸಿದರು’ ಎಂದಿದ್ದಾರೆ.