ಕೊಲೆ ಪ್ರಕರಣದಲ್ಲಿ ದೋಷಿ - ಯುಎಇನಲ್ಲಿ ಕೇರಳ ಮೂಲದ ಇಬ್ಬರಿಗೆ ಗಲ್ಲು ಶಿಕ್ಷೆ : ಸರ್ಕಾರ

| N/A | Published : Mar 07 2025, 12:49 AM IST / Updated: Mar 07 2025, 04:20 AM IST

mild earthquake hits uae

ಸಾರಾಂಶ

ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಇತ್ತೀಚೆಗೆ ಯುಎಇನಲ್ಲಿ ಗಲ್ಲಿಗೇರಿಸಲಾಗಿದೆ.

ದುಬೈ: ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಇತ್ತೀಚೆಗೆ ಯುಎಇನಲ್ಲಿ ಗಲ್ಲಿಗೇರಿಸಲಾಗಿದೆ. ಭಾರತದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಮರಣದಂಡನೆ ಪ್ರಕ್ರಿಯೆ ನಡೆದಿದೆ.

ಮರಣದಂಡನೆಗೆ ಒಳಗಾದವರನ್ನು ಕಣ್ಣೂರಿನ ಮುಹಮ್ಮದ್‌ ರಿನಾಶ್‌ ಮತ್ತು ಮುರುಳೀಧರನ್ ಎಂದು ಗುರುತಿಸಲಾಗಿದೆ. ಆಲ್‌ ಐನ್‌ನ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿನಾಶ್‌ನನ್ನು ಯುಎಇ ಪ್ರಜೆಯ ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿಸಿದ್ದರೆ, ಮುರುಳೀಧರನ್ ಅವರನ್ನು ಭಾರತೀಯ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ. 

ಫೆ.28ರಂದು ಭಾರತದ ರಾಯಭಾರಿ ಕಚೇರಿಗೆ ಮರಣದಂಡನೆಗೆ ಸಂಬಂಧಿಸಿದಂತೆ ಮಾಹಿತಿ ಸಿಕ್ಕಿತ್ತು. ಇಬ್ಬರಿಗೂ ಸಾಧ್ಯವಿರುವ ಎಲ್ಲ ಕಾನೂನು ನೆರವು ನೀಡಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಇಬ್ಬರು ಕುಟುಂಬ ಸದಸ್ಯರು ಭಾಗವಹಿಸಲು ವ್ಯವಸ್ಥೆ ಮಾಡಲು ಸಚಿವಾಲಯ ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ಹೇಳಿದೆ. ವರದಿ ಪ್ರಕಾರ, ಯುಎಇನಲ್ಲಿ 28 ಭಾರತೀಯರು ಮರಣದಂಡನೆಗೆ ಗುರಿಯಾಗಿದ್ದಾರೆ. ಮಾ.3ರಂದು ಮಗು ಕೊಂದ ಆರೋಪದಲ್ಲಿ ಉತ್ತರ ಪ್ರದೇಶದ ಮಹಿಳೆಯನ್ನು ಗಲ್ಲಿಗೇರಿಸಲಾಗಿತ್ತು.