ಹಾರ್ವರ್ಡ್‌ ವಿವಿಗೆ ವಿದೇಶಿಗರ ಪ್ರವೇಶಕ್ಕೆ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ತಡೆ

| N/A | Published : May 24 2025, 12:42 AM IST / Updated: May 24 2025, 04:18 AM IST

ಹಾರ್ವರ್ಡ್‌ ವಿವಿಗೆ ವಿದೇಶಿಗರ ಪ್ರವೇಶಕ್ಕೆ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಲಸಿಗರ ವಿರೋಧಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತದೇ ಧೋರಣೆ ತೋರಿದ್ದು, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್‌ ವಿವಿಗೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ಬಂಧಿಸುವಂತೆ ಆದೇಶಿಸಿದ್ದಾರೆ  

 ವಾಷಿಂಗ್ಟನ್‌ : ವಲಸಿಗರ ವಿರೋಧಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತದೇ ಧೋರಣೆ ತೋರಿದ್ದು, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್‌ ವಿವಿಗೆ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ಬಂಧಿಸುವಂತೆ ಆದೇಶಿಸಿದ್ದಾರೆ ಹಾಗೂ ಅಂಥ ವಿದ್ಯಾರ್ಥಿಗಳಿಗೆ ಬೇರೆ ವಿವಿ ಸೇರುವ ಅಥವಾ ದೇಶ ತೊರೆಯುವ ಆಯ್ಕೆ ನೀಡಿದ್ದಾರೆ. ಆದರೆ ಈ ಬೆನ್ನಲ್ಲೆ ಟ್ರಂಪ್ ಆದೇಶಕ್ಕೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ.

ಇದರಿಂದಾಗಿ ಹಾರ್ವರ್ಡ್‌ನಲ್ಲಿ ಪ್ರಸಕ್ತ ಇರುವ 800 ಭಾರತೀಯರು ಸೇರಿ 6800 ವಿದೇಶಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

ಅಮೆರಿಕದ ಭದ್ರತಾ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿ, ‘ಆ ವಿವಿಯು ಯಹೂದಿಗಳ ಮೇಲೆ ಹಲ್ಲೆ ಮಾಡುವ ಅಮೆರಿಕ ವಿರೋಧಿ ಮತ್ತು ಉಗ್ರ ಬೆಂಬಲಿಗರನ್ನು ಸಲಹುತ್ತಿದೆ. ಜತೆಗೆ, ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೂ ಸಮನ್ವಯದಿಂದಿದೆ. ಈ ಮೂಲಕ ಅಸುರಕ್ಷಿತ ವಾತಾವರಣ ನಿರ್ಮಿಸಿದೆ’ ಎಂಬ ಕಾರಣ ನೀಡಿ ಈ ಆದೇಶ ಹೊರಡಿಸಿದೆ.

ಹಾರ್ವರ್ಡ್ ವಿವಿ ಕೋರ್ಟ್‌ಗೆ:

ಆದರೆ, ಇದನ್ನು ಕಾನೂನುಬಾಹಿರ ಎಂದಿರುವ ಹಾರ್ವರ್ಡ್‌, ಟ್ರಂಪ್ ನಿರ್ಧಾರದ ವಿರುದ್ಧ ಕೋರ್ಟ್‌ಗೆ ಹೋಗಿದೆ, ‘ಪ್ರತೀಕಾರದ ಕ್ರಮವು ಹಾರ್ವರ್ಡ್ ಸಮುದಾಯ ಮತ್ತು ದೇಶಕ್ಕೆ ಹಾನಿ ಉಂಟುಮಾತ್ತದೆ. ಅಂತೆಯೇ, ಹಾರ್ವರ್ಡ್‌ನ ಶೈಕ್ಷಣಿಕ ಮತ್ತು ಸಂಶೋಧನಾ ಧ್ಯೇಯವನ್ನು ದುರ್ಬಲಗೊಳಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 

ಭಾರತೀಯರಿಗೆ ಸಂಕಷ್ಟ:

ಪ್ರಸ್ತುತ ಹಾರ್ವರ್ಡ್‌ನಲ್ಲಿ 800 ಭಾರತೀಯರು ಸೇರಿ 100 ದೇಶಗಳ 6,800 ವಿದ್ಯಾರ್ಥಿಗಳಿದ್ದು, ಬಹುತೇಕರು ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಪ್ರತಿ ವರ್ಷ 500ರಿಂದ 800 ಭಾರತೀಯರು ಹಾರ್ವರ್ಡ್‌ಗೆ ದಾಖಲಾಗುತ್ತಿದ್ದು, ಇದೀಗ ಅಮೆರಿಕದ ನಿರ್ಧಾರದಿಂದ ಅವರೆಲ್ಲ ಅತಂತ್ರರಾಗಿದ್ದಾರೆ.

ಬೈಡೆನ್‌ ಅಧ್ಯಕ್ಷರಾಗಿದ್ದಾಗ ಏಷ್ಯನ್ ಅಮೆರಿಕನ್ನರ ಕುರಿತ ಸಲಹೆಗಾರರಾಗಿದ್ದ ಅಜಯ್‌ ಭುತೋರಿಯಾ ಪ್ರತಿಕ್ರಿಯಿಸಿ, ‘ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಆರ್ಥಿಕತೆಗೆ ವಾರ್ಷಿಕ 76 ಸಾವಿರ ಕೋಟಿ ರು. ಕೊಡುಗೆ ನೀಡುತ್ತಾರೆ. ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ತರುತ್ತಾರೆ. ಅವರ ಹಾರ್ವರ್ಡ್‌ ಪ್ರವೇಶ ನಿರ್ಬಂಧಿಸುವುದರಿಂದ, ರಾಜಕೀಯ ಉದ್ದೇಶಕ್ಕೆ ಅವರ ಕನಸು ಚೂರಾದಂತಾಗುತ್ತದೆ’ ಎಂದರು.

Read more Articles on