ಪ್ರವಾದಿಯನ್ನು ನಿಂದಿಸಿದ್ದ ಸಮಯದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ, ಇಸ್ಲಾಂ ವಿರೋಧಿ ರಾಜಕಾರಣಿ ಗ್ರೀಟ್‌ ವಿಲ್ಡರ್ಸ್ ನೆದರ್ಲೆಂಡ್‌ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇವರು ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ತಿಳಿಸಿವೆ.

ದ ಹೇಗ್‌: ಪ್ರವಾದಿಯನ್ನು ನಿಂದಿಸಿದ್ದ ಸಮಯದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ, ಇಸ್ಲಾಂ ವಿರೋಧಿ ರಾಜಕಾರಣಿ ಗ್ರೀಟ್‌ ವಿಲ್ಡರ್ಸ್ ನೆದರ್ಲೆಂಡ್‌ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇವರು ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಇದೇ ಮೊದಲ ಬಾರಿಗೆ ಸಂಪೂರ್ಣ ಇಸ್ಲಾಂ ವಿರೋಧಿ ಎನಿಸಿಕೊಂಡಿರುವ ವ್ಯಕ್ತಿಯೊಬ್ಬರು ಡಚ್ಚರ ಪ್ರಧಾನಿಯಾಗಲಿದ್ದಾರೆ ಎನ್ನಲಾಗಿದೆ. ನೂಪುರ್‌ ಶರ್ಮಾ ಸತ್ಯ ನುಡಿದಿದ್ದಾರೆ ಹೀಗಾಗಿ ಇಡೀ ವಿಶ್ವ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಅವರಿಗೆ ನೊಬೆಲ್‌ ಪ್ರಶಸ್ತಿ ನೀಡಬೇಕು ಎಂದು ವಿಲ್ಡರ್ಸ್‌ ಹೇಳಿದ್ದರು.

ವಿಲ್ಡರ್ಸ್‌ ಅವರ ಪಕ್ಷ 37 ಸ್ಥಾನಗಳಲ್ಲಿ ಜಯಗಳಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಇವರಿಗೆ ಪ್ರಧಾನಿ ಸ್ಥಾನ ಸಿಗಲಿದೆ ಎನ್ನಲಾಗಿದೆ. ಕಳೆದ ಚುನಾವಣೆಗಿಂತ ದುಪ್ಪಟ್ಟು ಸ್ಥಾನಗಳಲ್ಲಿ ವಿಲ್ಡರ್ಸ್‌ ಪಕ್ಷ ಈ ಬಾರಿ ಜಯಗಳಿಸಿದೆ.