ತಿಂಗಳು ದಾಟಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್‌ ಮಣಿಸಲು ತಮ್ಮೆಲ್ಲಾ ಶಕ್ತಿ ಬಳಸುವ ಕುರಿತು ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಅನ್ನು ಮರಳಿ ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

 ವಾಷಿಂಗ್ಟನ್‌: ತಿಂಗಳು ದಾಟಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್‌ ಮಣಿಸಲು ತಮ್ಮೆಲ್ಲಾ ಶಕ್ತಿ ಬಳಸುವ ಕುರಿತು ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಅನ್ನು ಮರಳಿ ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ‘ಮುಂದಿನ 2-3 ವಾರಗಳ ಕಾಲ ನಾವು ಇರಾನ್ ಮೇಲೆ ಭೀಕರ ದಾಳಿ ನಡೆಸಲಿದ್ದೇವೆ. ಈ ದಾಳಿಯ ಮೂಲಕ ಇರಾನ್‌ ಎಲ್ಲಿಗೆ ಸೇರಿದೆಯೋ, ಮರಳಿ ಆ ಶಿಲಾಯುಗಕ್ಕೆ ಕಳುಹಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಅವರ ಈ ಹೇಳಿಕೆ ಇರಾನ್‌ನ ಮೂಲಸೌಕರ್ಯಗಳನ್ನು ಪೂರ್ಣ ನಾಶ ಮಾಡಿ, ದೇಶವನ್ನು ಅಭಿವೃದ್ಧಿಪೂರ್ವ ಅವಧಿಗೆ ಕೊಂಡೊಯ್ಯುವ ಎಚ್ಚರಿಕೆ ಒಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ನಮ್ಮದು 6000 ವರ್ಷ ಇತಿಹಾಸ: ಇರಾನ್‌ ಸಡ್ಡು 

ಟೆಹ್ರಾನ್‌: ‘ಇರಾನ್‌ ಅನ್ನು ಶಿಲಾಯುಗಕ್ಕೆ ಮರಳಿ ಕಳಿಸುತ್ತೇವೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಬೆದರಿಕೆಗೆ ದಿಟ್ಟ ಉತ್ತರ ನೀಡಿರುವ ಶಿಯಾ ರಾಷ್ಟ್ರ, ‘ಕೇವಲ 250 ವರ್ಷಗಳ ಹಿಂದೆ ಹುಟ್ಟಿದ ದೇಶವೊಂದು, ಬರೋಬ್ಬರಿ 6000 ವರ್ಷಗಳಿಗೂ ಹಳೆಯ ನಾಗರಿಕತೆಯನ್ನು ಬೆದರಿಸುತ್ತಿದೆ’ ಎಂದು ಅಪಹಾಸ್ಯ ಮಾಡಿದೆ.

ಟ್ರಂಪ್‌ ಎಚ್ಚರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್‌

ಟ್ರಂಪ್‌ ಎಚ್ಚರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್‌ನ ಬ್ರಿಗೇಡಿಯರ್ ಜನರಲ್ ಸೆಯದ್ ಮಜೀದ್ ಮೂಸಾವಿ, ‘ಅಮೆರಿಕವೇ ತನ್ನ ಸೈನಿಕರನ್ನು ಸಮಾಧಿಯತ್ತ ಕರೆದೊಯ್ಯುತ್ತಿದೆ. ಹಾಲಿವುಡ್‌ ಸಿನಿಮಾಗಳು ನಿಮ್ಮ (ಟ್ರಂಪ್‌) ಮನಸ್ಸನ್ನು ವಿಷಪೂರಿತಗೊಳಿಸಿವೆ. ಆದ್ದರಿಂದಲೇ 6 ಸಾವಿರಕ್ಕೂ ಅಧಿಕ ವರ್ಷಗಳ ನಾಗರಿಕತೆಯಿರುವ ನಮಗೆ, 250 ವರ್ಷಗಳ ಹಿಂದಿನ ನೀವು ಬೆದರಿಕೆ ಹಾಕುತ್ತಿದ್ದೀರಿ’ ಎಂದು ತಿವಿದಿದ್ದಾರೆ.