ಬಿಹಾರದಲ್ಲಿ ಎನ್‌ಡಿಎದ ಅಭೂತಪೂರ್ವ ಗೆಲುವಿಗೆ ಬಿಜೆಪಿಯ ವೈಚಾರಿಕ ಮಾತೃಸಂಘಟನೆಯಾದ ಆರ್‌ಎಸ್‌ಎಸ್‌ನ ಸುದೀರ್ಘ ಯೋಜನೆಯೊಂದು ಕೂಡಾ ಪ್ರಮುಖ ಪಾತ್ರ ವಹಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಬಿಹಾರದಲ್ಲಿ ಎನ್‌ಡಿಎ ಗೆಲುವಿನ ತೇರನ್ನೆಳೆದದ್ದು, ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಭರವಸೆಗಳು. , ಸ್ತ್ರೀ ಕೇಂದ್ರಿತವಾಗಿದ್ದ ಹಲವು ಗ್ಯಾರಟಿಗಳಿಂದಾಗಿ ಮಹಿಳಾ ಮತಗಳು ಭಾರೀ ಪ್ರಮಾಣದಲ್ಲಿ ಎನ್‌ಡಿಎ ಪಾಲಾಗಿವೆ. ಈ ಬಾರಿ ಚಲಾವಣೆಯಾದ ಮತಗಳಲ್ಲಿ ಶೇ.71.78ರಷ್ಟು ಪಾಲು ಮಹಿಳೆಯರದ್ದು ಎಂಬುದು ಗಮನಾರ್ಹ.
ಜಾತಿ ರಾಜಕೀಯದ ಆಡೊಂಬಲವಾದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವರ್ಗದ ಮತಗಳನ್ನು ಸೆಳೆಯುವ ಮೂಲಕ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ತೀರಾ ಹಿಂದುಳಿದ, ದಲಿತರ ಜತೆಗೆ ಮೇಲ್ವಾತಿಗಳು ಹಾಗೂ ಮುಸ್ಲಿಂ-ಯಾದವ್ ಮತಗಳೂ ಈ ಬಾರಿ ಎನ್‌ಡಿಎ ಕೈಹಿಡಿದಿವೆ.