ಎಂಎಲ್ಸಿ ರಾಜೇಂದ್ರ ಹತ್ಯೆ ಸುಪಾರಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯೊಂದಲ್ಲಿ
ರಾಜೇಂದ್ರ ಅವರ ಹತ್ಯೆ ಸುಪಾರಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ರಾಜೇಂದ್ರ ಹತ್ಯೆಗೆ ರೌಡಿ ಶೀಟರ್ ಸೋಮು ಎಂಬಾತ ಸಂಚು ನಡೆಸಿದ್ದ ಬಗ್ಗೆ ಪ್ರಕರಣದ ಇತರ ಆರೋಪಿಗಳಾದ ರಾಕಿ ಹಾಗೂ ಪುಷ್ಪಾ ಎಂಬುವರು ಮಾತುಕತೆ ನಡೆಸಿದ್ದ 18 ನಿಮಿಷದ ಸ್ಫೋಟಕ ಆಡಿಯೋ ಬಹಿರಂಗವಾಗಿದೆ.
ಸುಪಾರಿ ಹಂತಕರಿಂದ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ಡಿಜಿಗೆ ಗುರುವಾರ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ಶಾಸಕ ರಾಜೇಂದ್ರ, ಡಿಜಿ ಸೂಚನೆಯಂತೆ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೆನ್‌ಡ್ರೈವ್ ಸಮೇತ ದೂರು ನೀಡಿದ್ದಾರೆ.
ಆಂದೋಲಾ ಸ್ಚಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್, ಮಣಿಕಂಠ ರಾಠೋಡ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟ್ರ ಮೂಲದ ಗುಂಡಾಗಳಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ರವಿಕುಮಾರ್ ಆರೋಪಿಸಿದ್ದಾರೆ.