ಇರಾನ್ ತನ್ನ ವೈರಿ ರಾಷ್ಟ್ರಗಳಿಗೆ ಮಹಾ ಆಘಾತ ನೀಡಲು ಮುಂದಾಗಿದ್ದು, ವಿಶ್ವದ ಅತ್ಯಂತ ನಿರ್ಣಾಯಕ ತೈಲ ಕಾರಿಡಾರ್ ಎಂದೇ ಬಿಂಬಿತ ಹೋರ್ಮುಜ್ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದಕ್ಕೆ ಇರಾನ್ ಸಂಸತ್ ಕೂಡ ಒಪ್ಪಿಗೆ ನೀಡಿದ್ದು, ಇದರಿಂದ ಭಾರತದ ತೈಲ ವಹಿವಾಟಿಗೂ ಪೆಟ್ಟು ಬೀಳಲಿದೆ.
ಅಮೆರಿಕದ ಜತೆ ಮಾತುಕತೆ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅರಗ್ಚಿ ಅವರು ಹೇಳಿದ್ದರೂ, ಅವರು ಶುಕ್ರವಾರ ಜಿನೇವಾಗೆ ಹೋಗಿದ್ದಾರೆ. ಅಲ್ಲಿ ಅವರು ಜರ್ಮನಿ, ಬ್ರಿಟನ್ ಹಾಗೂ ಪ್ರಾನ್ಸ್ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಯುದ್ಧ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
ಇರಾನ್‌ನ ಅಣ್ವಸ್ತ್ರ ಮತ್ತು ಸೇನಾ ನೆಲೆಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ ದಾಳಿಗೆ ಪ್ರತಿಯಾಗಿ ಶನಿವಾರ ಇರಾನ್ ಕೂಡಾ ಇಸ್ರೇಲ್ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದೆ.
ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದು ಇರಾನ್ ಮೇಲೆ ಇಸ್ರೇಲ್ ನಡೆಸಿದ ಮೊದಲ ಅಧಿಕೃತ ದಾಳಿ.
ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯದು ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾಖಮೇನಿ ಬಹಿರಂಗ ಘೋಷಣೆ ಮಾಡಿದ್ದಾರೆ