ಬಿಜೆಪಿಯವರಂತೆ ನಾವು ಯಾವತ್ತೂ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ, ಭಾವನಾತ್ಮಕವಾಗಿ ಕೆರಳಿಸಿ ನಂತರ ಕೈಕೊಡುವ ಕೆಲಸಗಳನ್ನು ಮಾಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಹಾಗೆಯೇ ನಡೆಯುತ್ತೇವೆ ಎಂದು ಸಿದ್ದು ಹೇಳಿದ್ದಾರೆ.
ನಮ್ಮ ಅವಧಿಯ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆ ಜಾರಿಯಲ್ಲೇ ಇಡುತ್ತೇವೆ. ಈ ಬಗ್ಗೆ ಸಂಶಯ ಪಡಬೇಕಾದ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರವು ‘ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ -1996’ ಪ್ರಕಾರ ಬೆಂಗಳೂರು ಅರಮನೆಯ 472.16 ಎಕರೆ ಜಾಗ ಸ್ವಾಧೀನಕ್ಕೆ ಕ್ರಮ ಕೈಗೊಂಡಿತ್ತು.