ಕನ್ನಡ ಆಡಳಿತ ಭಾಷೆಯಾದಾಗ ಮಾತ್ರ ಉಳಿಯಲು ಸಾಧ್ಯ
Nov 02 2025, 02:45 AM ISTಚನ್ನಪಟ್ಟಣ: ನಾಡಿನ ಪ್ರತಿಯೊಬ್ಬರು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡವನ್ನು ಅಂತರಂಗದ ಭಾಷೆ, ಕರುಳಿನ ಭಾಷೆಯನ್ನಾಗಿ ಸ್ವೀಕರಿಸಿ, ಶಿಕ್ಷಣ, ಆಡಳಿತದಲ್ಲಿ ಬೆಳೆಸಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಯಲು-ಬೆಳೆಯಲು ಸಾಧ್ಯ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಇಂದ್ರಮ್ಮ ಕೆ.ಆರ್.ಅಭಿಪ್ರಾಯಪಟ್ಟರು.