ಎಸ್‌ಆರ್‌ಎಸ್‌ ಶಾಲೆಯಲ್ಲಿ ದಸರಾ ಬೊಂಬೆಗಳ ಉತ್ಸವ

Sep 23 2025, 01:03 AM IST
ಇಂದಿನ ಮಕ್ಕಳಲ್ಲಿ ನಮ್ಮ ದೇಶೀಯ ಪರಂಪರೆ ಹಾಗೂ ದಸರಾ ಬೊಂಬೆಗಳ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಸೋಮವಾರ ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾ ಶಾಲೆಯಲ್ಲಿ ’ದಸರಾ ಬೊಂಬೆ ಸಂಭ್ರಮ - ೨೦೨೫’ ಅನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗಿತ್ತು. ಮಕ್ಕಳಿಗೆ ದಸರಾ ಬೊಂಬೆ ಸಂಭ್ರಮದ ಮಹತ್ವ, ಹಾಗೂ ಹತ್ತು ದಿನಗಳ ಕಾಲ ಅಂದಿನಿಂದಲು ದಸರಾ ಬೊಂಬೆಗಳ ಪ್ರದರ್ಶನ ನಡೆಸುತ್ತಿದ್ದ ಹಿಂದಿರುವ ಉದ್ದೇಶವೇನೆಂದು ಸವಿಸ್ತಾರವಾಗಿ ವಿವರಿಸಲಾಯಿತು. ಆ ಮೂಲಕ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ದಸರಾ ಹಬ್ಬದ ಇತಿಹಾಸವನ್ನು ಪರಿಚಯಿಸುವುದರೊಂದಿಗೆ ಸೆ.22 ರಿಂದ ಅಕ್ಟೋಬರ್‌ 1ರವರೆಗೆ ಹತ್ತು ದಿನಗಳ ಬೊಂಬೆಗಳನ್ನು ಇಡಲಾಗುವುದು.