ಕುಡಿವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿ: ಶಾಸಕ ರಾಜಾ ವೆಂಕಟಪ್ಪ ನಾಯಕ
Jan 22 2024, 02:17 AM ISTಸುರಪುರ ಮತ್ತು ಹುಣಸಗಿ ಈ ಎರಡು ತಾಲೂಕು ತಹಸೀಲ್ದಾರರು, ಕಂದಾಯ ಇಲಾಖೆಯವರು, ಗ್ರಾಮೀಣ ಕುಡಿಯುವ ನೀರು, ಪಶು ಸಂಗೋಪನೆ, ಕೃಷಿ, ತೋಟಗಾರಿಕೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಬೋರವೆಲ್ ಕೊರೆಸಬೇಕು. ಸಮಸ್ಯೆ ತೀವ್ರವಾಗಿದ್ದರೆ ಟ್ಯಾಂಕ್ರ್ ಮೂಲಕ ನೀರು ಸರಬರಾಜು ಮಾಡಬೇಕು.