ಕ್ರೀಡಾಕೂಟದ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ
Apr 08 2025, 12:31 AM ISTಹಾಸನದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಕೂಟದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕಾವೇರಿಯಲ್ಲಿ ಸೋಮವಾರ ಅನಾವರಣ ಮಾಡಿದರು. ಕ್ರಿಕೆಟ್ ಕ್ರೀಡಾಕೂಟ ಲಾಂಛನವು, ಹಾಸನ ಜಿಲ್ಲೆಯ ಜೀವನದಿ ಹೇಮಾವತಿ, ಹೊಯ್ಸಳ ಶಿಲ್ಪಕಲೆಯ ತವರೂರು, ಗೊಮ್ಮಟನ ನೆಲೆಬೀಡು ಎನ್ನುವುದನ್ನು ಪ್ರತಿನಿಧಿಸುತ್ತದಲ್ಲದೆ. ಮಲೆನಾಡು, ಅರೆ ಮಲೆನಾಡು, ಬಯಲುಸೀಮೆಯ ಸೊಗಡನ್ನು ಪ್ರತಿಬಿಂಬಿಸುವಂತಿದೆ.