ಚನ್ನಗಿರಿ ಕೆರೆ ವಾಕಿಂಗ್ ಪಾತ್ ಪ್ರದೇಶದಲ್ಲಿ ಬೇಕಿದೆ ರಕ್ಷಣಾ ವ್ಯವಸ್ಥೆ
Mar 31 2024, 02:00 AM ISTಚನ್ನಗಿರಿ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಕೆರೆಯ ಸುತ್ತಲೂ 1 ಕಿ.ಮೀ. ಸುತ್ತಳತೆಯಲ್ಲಿ ಸುಸಜ್ಜಿತ ವಾಕಿಂಗ್ ಪಾತ್ ನಿರ್ಮಾಣವಾಗಿ ಮೂರು ವರ್ಷಗಳೇ ಕಳೆದಿವೆ. ಪುರುಷರಿಗೆ, ಮಹಿಳೆಯರಿಗೆ, ವಯೋವೃದ್ದರಿಗೆ ವಾಯುವಿಹಾರ ನಡೆಸಲು ಇದು ಉತ್ತಮ ವಾತಾವರಣದ ಪ್ರದೇಶವಾಗಿದೆ. ಆದರೆ, ಕೆಲವು ಅವಿವೇಕಿಗಳ ಕುಚೇಷ್ಟೆಗಳಿಂದ ವಾಯು ವಿಹಾರಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.