ಕನಕಗಿರಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಉತ್ತಮ ಸ್ಪಂದನೆ
Feb 11 2024, 01:48 AM ISTವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಪಟಾಕಿಗಳನ್ನು ಸಿಡಿಸುವ ಮೂಲಕ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ, ಪೂರ್ಣ ಕುಂಭ ಹಾಗೂ ಕಳಶ ಹಿಡಿದ ಮಹಿಳೆಯರಿಂದ ಜಾಥಕ್ಕೆ ಸ್ವಾಗತ, ಡೊಳ್ಳು ಕುಣಿತ, ಕ್ಯಾಂಡಲ್ ಜಾಥಾ, ಬೈಕ್ ರ್ಯಾಲಿ, ಸೈಕಲ್ ರ್ಯಾಲಿ ಹೀಗೆ ಹಲವು ಬಗೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅಭೂತ ಪೂರ್ವಕ ಬೆಂಬಲ ನೀಡಿದರು.