ಕುಲಹಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಥಾಗೆ ಅದ್ಧೂರಿ ಸ್ವಾಗತ
Feb 09 2024, 01:49 AM ISTರಬಕವಿ-ಬನಹಟ್ಟಿ: ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರ್ಣ ಹಿನ್ನಲೆಯಲ್ಲಿ ಕಳೆದ ಜ.೨೬ ರಿಂದ ಆರಂಭವಾಗಿರುವ ಸಂವಿಧಾನ ಜಾಗೃತಿ ಜಾಥಾವು ಗುರುವಾರ ತಾಲೂಕಿನ ಕುಲಹಳ್ಳಿ ಗ್ರಾಮಕ್ಕೆ ಆಗಮಿಸಿತು.ಗ್ರಾಮದ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಮೂಲಕ ಬೃಹತ್ ಮೆರವಣಿಗೆ ನಡೆಯಿತು. ಡೊಳ್ಳು, ಭಾಜಾ, ಭಜಂತ್ರಿ ಸೇರಿದಂತೆ ವಿವಿಧ ವಾದ್ಯಮೇಳಗಳಿದ್ದವು.