ಪೊಲೀಸರೇ ಆರೋಪಿಯ ಮೊಬೈಲ್ ಬಳಸಿ ಆನ್ಲೈನ್ನಲ್ಲಿ ಬೆಟ್ಟಿಂಗ್ ಆಡಿ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬೆಳಕಿಗೆ ಬಂದಿದೆ.
ಕೆನರಾ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ತಿಂಗಳ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.
ಮಳೆಗಾಲದಲ್ಲಿ ಗುಡ್ಡ ಕುಸಿತ, ಬೇಸಿಗೆಯಲ್ಲಿ ನೀರಿನ ಅಭಾವ, ಜೀವವೈವಿಧ್ಯಕ್ಕೆ ಬಂದಿರುವ ಕುತ್ತು ಸೇರಿ ಇತರೆ ದುಷ್ಪರಿಣಾಮಗಳಿಂದ ಎಚ್ಚೆತ್ತ ಸರ್ಕಾರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಪಡೆಯಲು ಮುಂದಾಗಿದೆ.
ಠಾಣೆಗಳಿಗೆ ಭೇಟಿ ಹಾಗೂ ಶೇ.80 ರಷ್ಟು ಠಾಣೆಗಳ ಪರಿವೀಕ್ಷಣೆ (inspection) ನಡೆಸಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಹೊಸ ದಾಖಲೆ ಬರೆದಿದ್ದಾರೆ.
ಯಾವುದೇ ದ್ರಾವಿಡ ಭಾಷೆಗಳು ಬೇರೊಂದರಿಂದ ಹುಟ್ಟಿಲ್ಲ. ಕೆಲವರು ನಾಲಿಗೆ ಹರಿಬಿಟ್ಟು ಸಮಸ್ಯೆ ಮಾಡುತ್ತಿರುವುದು ಮಾತ್ರವಲ್ಲದೆ ಕ್ಷಮೆ ಕೇಳಲು ಹಿಂದೇಟು ಹಾಕಿ ಪ್ರತಿಷ್ಠೆ ತೋರುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಉದ್ಯಮಿಯೊಬ್ಬರು ಕುಟುಂಬ ಸಮೇತ ತಿರುಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ನೇಪಾಳ ಮೂಲದ ಕಾವಲುಗಾರ ದಂಪತಿ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿ 3 ದಿನಗಳಾಗಿವೆ. ಪ್ರಶಸ್ತಿ ಕದನದಲ್ಲಿ ಆರ್ಸಿಬಿಗೆ ಎದುರಾಳಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ.
78 ವರ್ಷಗಳ ಸುದೀರ್ಘ ಪ್ರಜಾಪ್ರಭುತ್ವ ಆಡಳಿತದಲ್ಲಿ ಮೊದಲ ಬಾರಿಗೆ ಮಂಡ್ಯಕ್ಕೆ ಕೃಷಿ ಇಲಾಖೆ ಹೊಣೆಗಾರಿಕೆ ಸಿಕ್ಕಿದೆ. ಚಲುವರಾಯಸ್ವಾಮಿ ತಾವು ಕೃಷಿ ಸಚಿವರಾಗಿ 15-16 ತಿಂಗಳೊಳಗಾಗಿ ಅನುಷ್ಠಾನಗೊಳಿಸಿರುವುದು ವಿಶೇಷ.
ಈ ಮಾತುಕತೆ ನಡೆಯುತ್ತಿರುವ ಹೊತ್ತಿಗೆ ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪಡೆದು ಭಾರತಕ್ಕೆ ಮರಳಿ ಕೆಲವೇ ಗಂಟೆಗಳಾಗಿದ್ದವು. ಮುಂಬಯಿಯಿಂದ ಅವರು ಮಾತಾಡುತ್ತಿದ್ದರು. ಪ್ರಯಾಣದ ಸುಸ್ತು, ಅಪರಾತ್ರಿಯಲ್ಲಿ ಯಾರು ಮಾತಾಡುತ್ತಾರೆ ಅನ್ನುವ ಉದಾಸೀನ ಇಲ್ಲದೇ, 77ರ ಬಾನು ಮಾತಿಗೆ ಮುಂದಾದರು