ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನಾಗರಾಜ ಯಾದವ್ ಮಾತುಗಳೆಂದರೆ ಎಕ್ಸ್ಪ್ರೆಸ್ ರೈಲಿನಂತೆ, ನಾನ್ಸ್ಟಾಪ್. ಕೆಲವು ಸಾರಿ ಬುಲೆಟ್ ಟ್ರೈನ್ ಎಂದರೂ ತಪ್ಪಾಗಲಾರದು.
ಆರ್ಎಸ್ಎಸ್ ಗೀತೆ ಹಾಡಿದ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವುದಾದರೆ ನಾನು ಹಾಗೂ ನಮ್ಮ ಶಾಸಕರು ಸಹ ಹಾಡುತ್ತಾರೆ, ನಮ್ಮನ್ನು ಸಿಎಂ ಮಾಡುತ್ತಾರೆಯೇ? ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗವಾಡಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್ಎಸ್ಎಸ್ ಗೀತೆ ಹಾಡಿ ಎಲ್ಲರ ಗಮನ ಸೆಳೆದಿದ್ದ ಬೆನ್ನಲ್ಲೇ ಅವರ ಷಡ್ಡಕರೂ ಆಗಿರುವ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಕೂಡ ಅದೇ ಗೀತೆಯನ್ನು ಹಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಿ.ಕೆ.ಶಿವಕುಮಾರ್ ಅವರು ಆರ್ಎಸ್ಎಸ್ ಗೀತೆ ಹಾಡಬಹುದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ವೇದಿಕೆಯಲ್ಲಿ ಕೂರಬಹುದು. ಹೀಗೆ ಏನು ಬೇಕಾದರೂ ಮಾಡಬಹುದು. ಆದರೆ, ನಾವು ಮಾತ್ರ ಏನು ಮಾತನಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಳಿತೇ ಇರುವುದು ಒಳ್ಳೆಯದಲ್ಲ ಅಂತ ಪಕ್ಕದ್ಮನೆ ಅಂಕಲ್ರಿಂದ ಹಿಡಿದು ಫ್ಯಾಮಿಲಿ ಡಾಕ್ಟರ್ವರೆಗೆ ಎಲ್ಲರೂ ಹೇಳುತ್ತಾರೆ. ಅದಕ್ಕೆ ತಕ್ಕಂತೆ ಮರುದಿನ ವೀರಾವೇಷದಿಂದ ಎದ್ದು ವಾಕಿಂಗ್ ಹೋದರೂ ನಾಲ್ಕನೇ ದಿನ ಬೋರ್ ಆಗಿರುತ್ತದೆ. ಯಾರಾದರೂ ಜೊತೆ ಇದ್ರೆ ಹೋಗಬಹುದು ಗುರು ಅನ್ನಿಸತೊಡಗುತ್ತದೆ.
ಗೊತ್ತಿದ್ದೋ ಗೊತ್ತಿಲ್ಲದೆಯೋ ಎಐ ನಮ್ಮ ಜೀವನದ ಭಾಗವಾಗಿದೆ. ಮೊಬೈಲ್ ಎತ್ತಿಕೊಂಡು ಫೋಟೋ ತೆಗೆದರೆ ಅದು ತನ್ನಿಂತಾನೇ ಎಐ ಮೂಲಕ ಫೋಟೋ ಎಡಿಟ್ ಮಾಡಿ ಕೊಡುತ್ತದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಬುರುಡೆ ಬಿಟ್ಟಿದ್ದ ಚಿನ್ನಯ್ಯನ ತಂದೆ ನಂಜಯ್ಯ ಮೂಲತಃ ತಮಿಳುನಾಡಿನವರು. ಅವರು ಮಂಡ್ಯದ ಚಿಕ್ಕಬಳ್ಳಿ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದರು.
ಧರ್ಮಸ್ಥಳ ಗ್ರಾಮದ ತಲೆ ಬುರುಡೆ ಪ್ರಕರಣದಲ್ಲಿ ಸಿಲುಕಿಕೊಂಡು ಎಸ್ಐಟಿ ಬಂಧನ ಭೀತಿಯಲ್ಲಿದ್ದಾಗ ದೂರುದಾರ ಚಿನ್ನಯ್ಯನ ನೆರವಿಗೆ ಯಾರೂ ಇರಲಿಲ್ಲ.
ರಾಜ್ಯದಲ್ಲಿ ಆ.27 ರಿಂದ ಮತ್ತೆ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ನ ಶೌಚಾಲಯಲದಲ್ಲಿ ಆ.16ರಂದು ಮಗುವಿನ ಶವ ಪತ್ತೆಯಾದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆತ್ತ ತಾಯಿಯೇ 1 ದಿನದ ಗಂಡು ಮಗುವನ್ನು ಕತ್ತು ಸೀಳಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.