ಶಿಕ್ಷಣ ವ್ಯವಸ್ಥೆಯ ಮೇಲೆ ಆರ್ಎಸ್ಎಸ್ ಸಂಪೂರ್ಣ ನಿಯಂತ್ರಣ ಸಾಧಿಸಿದರೆ, ಯಾರಿಗೂ ಉದ್ಯೋಗ ಸಿಗದಂತಾಗಿ ದೇಶವೇ ನಾಶವಾಗುತ್ತದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ. ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹನಿಟ್ರ್ಯಾಪ್ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಫೋನ್ ಕದ್ದಾಲಿಕೆ ವಿಚಾರದ ಚರ್ಚೆ ಮುನ್ನಲೆಗೆ ಬಂದಿದ್ದು, ತಮ್ಮ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರದ ಆರ್ಡಿಎಸ್ಎಸ್ ಯೋಜನೆಯಡಿ ರಾಜ್ಯವು ಸೇರದ ಕಾರಣ ಸ್ಮಾರ್ಟ್ ಮೀಟರ್ಗೆ ದೊರೆಯುವ ಶೇ.15 ಸಬ್ಸಿಡಿ ಗ್ರಾಹಕರಿಗೆ ದೊರೆಯುತ್ತಿಲ್ಲ. ಜತೆಗೆ ಕೆಇಆರ್ಸಿ ನಿಯಮದ ಪ್ರಕಾರ ರಾಜ್ಯದಲ್ಲಿ ಗ್ರಾಹಕರೇ ಸ್ಮಾರ್ಟ್ ಮೀಟರ್ ಖರೀದಿಸಬೇಕು.
ಹೆಚ್ಚಳ ಮಾಡುವ ಹಾಲಿನ ದರದ ಪೂರ್ಣ ಹಣವನ್ನು ರೈತರಿಗೆ ಕೊಡಲು ಒಪ್ಪದ ಹಾಲು ಒಕ್ಕೂಟಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಏರಿಕೆ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಆರೋಪ ಮತ್ತೊಮ್ಮೆ ಸದ್ದು ಮಾಡಿದ್ದು, ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕದ್ದಾಲಿಕೆ ದೂರು ನೀಡಿದ್ದಾರೆ ಎಂಬ ಗುಲ್ಲೆದ್ದಿದೆ.
ಶಿವಸೇನೆಯ ಯುವ ಸೇನೆ ‘ಬೆಳಗಾವಿ ಬಂದ್ ಮಾಡುವ ತಾಕತ್ತು ಕೇವಲ ಮರಾಠಿಗರ ರಕ್ತದಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಕನ್ನಡಿಗರನ್ನು ಕೆರಳಿಸಿದೆ.
-ಹುಟ್ಟುಹಬ್ಬದ ಗ್ರೀಟಿಂಗ್ಸ್ ಕಂಡು ನಕ್ಕ ದಯಾನಂದ್ । ಸೆಲ್ಫಿ, ಸಿಂಗಲ್ ಫೋಟೋ ಅಂದರೆ ರಾಜಕಾರಣಿಗಳು ಬೆಚ್ಚಿ ಬೀಳೋದ್ಯಾಕೆ?
ತಮ್ಮ ಹೆಸರಿನಲ್ಲೇ ತಾವೇ ವಿಶ್ ಮಾಡಿಕೊಂಡ ಆಯುಕ್ತ!
ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಏನು ಹೇಳುತ್ತಿದ್ದಾರೆಂಬುದು ಮುಖ್ಯವೇ ಹೊರತು ಕೆ.ಅಣ್ಣಾಮಲೈ ಏನು ಹೇಳಿದ್ದಾರೆಂಬುದು ಅಲ್ಲ. ಪಾಪ, ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಸುಭಾಷ್ ಅವರಿಗೆ ಕಲಬುರಗಿಯ ಯುವತಿ ಜತೆಗೆ ಸೋಮವಾರ ನಿಶ್ಚಿತಾರ್ಥ ನಡೆಯಲಿದೆ.