ಸಾರಾಂಶ
ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ ರಸ್ತೆಗೆ ಎಸೆಯಲಾದ 2 ಐಸ್ ಕ್ರೀಂ ಬಾಂಬ್‌ಗಳು ಸ್ಫೋಟಗೊಂಡಿವೆ.
ಕಣ್ಣೂರು: ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ ರಸ್ತೆಗೆ ಎಸೆಯಲಾದ 2 ಐಸ್ ಕ್ರೀಂ ಬಾಂಬ್‌ಗಳು ಸ್ಫೋಟಗೊಂಡಿವೆ. ರಸ್ತೆಗೆ ಎಸೆದ 3 ಐಸ್ ಕ್ರೀಮ್ ಆಕೃತಿಯ ಬಾಂಬ್‌ಗಳಲ್ಲಿ 2 ಬಾಂಬ್‌ಗಳು ಸ್ಫೋಟಗೊಂಡಿದ್ದು, ಮತ್ತೊಂದು ಬಾಂಬ್ ಸ್ಫೋಟಗೊಳ್ಳುವುದರ ಒಳಗೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ಬಾಂಬ್ ನಿಷ್ಕ್ರಿಯಗೊಳಿಸಿದೆ.
ಘಟನೆ ನಡೆಸಿದ್ದು ಬೆಳಗಿನ ಜಾವವಾದ ಕಾರಣ ಬಾಂಬ್ ಎಸೆದವರು ಯಾರೆಂದು ಗುರುತಿಸಲಾಗಿಲ್ಲ. ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ದಿನ ಪಟ್ಟಮಕವಿಯ ದೇಗುಲ ಉತ್ಸವದಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಇದರ ಬೆನ್ನಲ್ಲೆ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬಾಂಬ್ ಅನ್ನು ಐಸ್‌ಕ್ರೀಂ ಕಂಟೇನರ್ ರೂಪದಲ್ಲಿ ತಯಾರಿಸಿದ್ದ ಕಾರಣ ಅದನ್ನು ಐಸ್‌ಕ್ರೀಂ ಬಾಂಬ್ ಎಂದು ಕರೆಯಲಾಗುತ್ತೆ.