3 ವರ್ಷದಲ್ಲಿ ರಾಜ್ಯದಲ್ಲಿ 3242 ಕೋಟಿ ರು. ಆರ್ಥಿಕ ವಂಚನೆ..!

| Published : Mar 09 2024, 01:33 AM IST / Updated: Mar 09 2024, 09:41 AM IST

Dr G Parameshwara
3 ವರ್ಷದಲ್ಲಿ ರಾಜ್ಯದಲ್ಲಿ 3242 ಕೋಟಿ ರು. ಆರ್ಥಿಕ ವಂಚನೆ..!
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಅಧಿಕ ಲಾಭದ ಆಮಿಷವೊಡ್ಡಿ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 3242 ಕೋಟಿ ರು. ಆರ್ಥಿಕ ವಂಚನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕರಿಗೆ ಅಧಿಕ ಲಾಭದ ಆಮಿಷವೊಡ್ಡಿ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 3242 ಕೋಟಿ ರು. ಆರ್ಥಿಕ ವಂಚನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

2021 ರಿಂದ 2023ರವರೆಗೆ 7375 ಆರ್ಥಿಕ ವಂಚನೆ ಪ್ರಕರಣಗಳು ದಾಖಲಾಗಿದ್ದು, 4475 ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನೂ 2900 ಪ್ರಕರಣಗಳು ತನಿಖಾ ಹಂತದಲ್ಲಿರುವುದಾಗಿ ಹೇಳಿದೆ. 

2021ರಲ್ಲಿ 1612 ಆರ್ಥಿಕ ವಂಚನೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 1399 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದರೆ, 213 ಪ್ರಕರಣಗಳು ತನಿಖಾ ಹಂತದಲ್ಲಿವೆ. 

2022ರಲ್ಲಿ 2597 ಪ್ರಕರಣಗಳು ದಾಖಲಾಗಿ 2211 ಪ್ರಕರಣಗಳು ಇತ್ಯರ್ಥಗೊಂಡಿದ್ದು, 386 ಪ್ರಕರಣಗಳ ತನಿಖೆ ನಡೆಯುತ್ತಿದೆ. 2023ರಲ್ಲಿ 3166 ಆರ್ಥಿಕ ವಂಚನೆ ಪ್ರಕರಣಗಳು ದಾಖಲಾಗಿದ್ದು, 865 ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದರೆ, 2301ಕರಣಗಳ ತನಿಖೆ ಮುಂದುವರೆದಿದೆ. 

ಅದೇ ರೀತಿ 2024ರ ಜನವರಿ 31ರವರೆಗೆ 286 ಪ್ರಕರಣಗಳು ದಾಖಲಾಗಿದ್ದು, 10 ಪ್ರಕರಣಗಳ ತನಿಖೆ ಮುಗಿದಿದ್ದರೆ, 296 ಪ್ರಕರಣಗಳ ತನಿಖೆ ಮುಂದುವರೆದಿದೆ.

2021ರಲ್ಲಿ1731,20,01,900 ರು., 2022ರಲ್ಲಿ 1085,58,70,060 ರು., 2023ರಲ್ಲಿ 426,51,76,560 ರು., 2024ರ ಜನವರಿ 31ರವರೆಗೆ 50,77,73,379 ರು. ಹಣವನ್ನು ಅಧಿಕ ಲಾಭದ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿದ್ದಾರೆ.

2021ರಲ್ಲಿ ಬೆಂಗಳೂರು ನಗರದಲ್ಲಿ 169,92,70,474 ರು. ಮತ್ತು ಬೆಳಗಾವಿಯಲ್ಲಿ 144,63,48,822ಕೋಟಿ ರು. ಅಧಿಕ ಆರ್ಥಿಕ ವಂಚನೆ ಪ್ರಕರಣಗಳು ವರದಿಯಾಗಿದ್ದರೆ, ಬೀದರ್, ಚಾಮರಾಜನಗರ, ಧಾರವಾಡ, ಮಡಿಕೇರಿ, ಕೋಲಾರ, ಮಂಡ್ಯ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಂದು ಆರ್ಥಿಕ ವಂಚನೆ ಪ್ರಕರಣವೂ ವರದಿಯಾಗಿಲ್ಲ.

2022ರಲ್ಲಿ ಬೆಂಗಳೂರು ನಗರದಲ್ಲಿ 452,83,31,365 ರು. ಅತಿ ಹೆಚ್ಚು ಆರ್ಥಿಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಹಾಸನ, ಮಡಿಕೇರಿ, ಮಂಡ್ಯ, ಕೊಪ್ಪಳ, ಯಾದಗಿರಿಯಲ್ಲಿ ಒಂದು ಆರ್ಥಿಕ ವಂಚನೆ ಪ್ರಕರಣವೂ ವರದಿಯಾಗಿರಲಿಲ್ಲ.

2023ರಲ್ಲಿ ಬೆಂಗಳೂರು ನಗರದಲ್ಲಿ 20,28,35,481 ರು. ಆರ್ಥಿಕ ವಂಚನೆ ಪ್ರಕರಣ ನಡೆದಿದ್ದು, ಧಾರವಾಡ, ಗದಗ, ಹಾಸನ, ಕೋಲಾರ, ಯಾದಗಿರಿಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದೆ.