ಕನ್ನಡಪ್ರಭ ವಾರ್ತೆ ಬೆಂಗಳೂರು
ಡ್ರಗ್ಸ್ ಮಾಫಿಯಾ ವಿರುದ್ಧ ರಾಜಧಾನಿ ಪೊಲೀಸರ ಕಾರ್ಯಾಚರಣೆ ಭರ್ಜರಿಯಾಗಿ ಮುಂದುವರೆದಿದ್ದು, ಎರಡು ವಾರಗಳಲ್ಲಿ ಸುಮಾರು 65 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಡ್ರಗ್ಸ್ ದಂಧೆ ವಿರುದ್ಧ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳ ಹಾಗೂ ಸ್ಥಳೀಯ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ನೂರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಪೆಡ್ಲರ್‌ಗಳು ಜೈಲು ಸೇರಿದ್ದಾರೆ. ಹೀಗಿದ್ದರೂ ನಗರಕ್ಕೆ ಡ್ರಗ್ಸ್ ಪೂರೈಕೆ ದಿನ ದಿನೇ ಹೆಚ್ಚುತ್ತಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಈ ಮಾದಕ ವಸ್ತು ಪೂರೈಕೆ ಜಾಲಾವನನ್ನು ಜಾಲಾಡುತ್ತಿರುವ ಪೊಲೀಸರು, ಪೆಡ್ಲರ್‌ಗಳ ಬಳಿಕ ಈಗ ಪೂರೈಕೆದಾರರ ಪತ್ತೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ನಗರಕ್ಕೆ ದೆಹಲಿ, ಆಂಧ್ರಪ್ರದೇಶ ಹಾಗೂ ಒಡಿಶಾ ಮೂಲಕ ಗಾಂಜಾ ಸರಬರಾಜುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ವಿದೇಶದಿಂದ ಸಹ ಕಳ್ಳ ಹಾದಿಯಲ್ಲಿ ನಾಡಿಗೆ ಡ್ರಗ್ಸ್ ಬರುತ್ತಿದೆ. ಡ್ರಗ್ಸ್ ಮಾರಾಟ ದಂಧೆಕೋರರ ಬುಡಕ್ಕೆ ಕೊಡಲಿ ಪೆಟ್ಟು ಕೊಡಲು ಖಾಕಿ ಪ್ರಯತ್ನ ನಡೆಸಿದೆ.ಓಪನ್ ಸುದ್ದಿ)))
ವಿಮಾನ ನಿಲ್ದಾಣದಲ್ಲಿ
₹4.53 ಕೋಟಿ ಡ್ರಗ್ಸ್ ಜಪ್ತಿಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಬ್ಯಾಕಾಂಕ್ ಪ್ರವಾಸಿಗರನ್ನು ಸೆರೆ ಹಿಡಿದು 4.53 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಶಂಕೆ ಮೇರೆಗೆ ಮೂವರು ಬ್ಯಾಕಾಂಗ್ ಪ್ರವಾಸಿಗರನ್ನು ವಶಕ್ಕೆ ಪಡೆದು ಅವರ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಿದಾಗ4.53 ಕೋಟಿ ರು ಮೌಲ್ಯದ 12.96 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಯಿತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದ ಈ ಮೂವರು, ಕಳ್ಳ ಹಾದಿಯಲ್ಲಿ ಡ್ರಗ್ಸ್ ಸಾಗಾಣಿಕೆಗೆ ಯತ್ನಿಸಿದ್ದರು. ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
