ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು ತಾಯಿ, ಅಕ್ಕ ಹಾಗೂ ಅಳೀಯನ ಕತ್ತು ಸೀಳಿ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.

 ಆನೇಕಲ್ : ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು ತಾಯಿ, ಅಕ್ಕ ಹಾಗೂ ಅಳೀಯನ ಕತ್ತು ಸೀಳಿ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಮಲ್ಲೇನಹಳ್ಳಿ ನಿವಾಸಿ ಮೋಹನ್ ಗೌಡ (32) ಎನ್ನುವಾತ ತನ್ನ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಹಾಗೂ ಅಕ್ಕನ ಮಗ ಮಯಾಂಕ್ (11) ಅವರ ಕತ್ತನ್ನೂ ಸೀಳಿದ್ದು, ಆ ಬಳಿಕ ತನ್ನ ಕತ್ತನ್ನೂ ಸೀಳಿಕೊಂಡಿದ್ದಾರೆ. ಇವರ ಪೈಕಿ ಆಶಾ ಹಾಗೂ ವರ್ಷಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಭೀಂರವಾಗಿ ಗಾಯಗೊಂಡಿರುವ ಮೋಹನ್ ಗೌಡ ಮತ್ತು ಮಯಾಂಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ಕನ ಚಿಕಿತ್ಸೆಗಾಗಿ ಸಾಲ:

ಮೋಹನ್ ಅವರ ಅಕ್ಕ ವರ್ಷಿತ ಒಂದುವರೆ ವರ್ಷಗಳಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಕೋಮಾ ಹಂತದಲ್ಲಿದ್ದರು. ಇವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಾಲ ಮಾಡಿಕೊಂಡಿದ್ದು, ಸಾಲದ ಹೊರೆ ತಡೆಯಲಾರದೆ ಮೋಹನ್ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. 

ಘಟನೆ ವಿವರ: 

ಸಾಲಗಾರರ ಕಾಟ ತಾಳಲಾರದೆ ಮಾ.28ರ ಸಂಜೆ ಮೋಹನ್ ಗೌಡ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಹಿಸಿದ್ದಾರೆ. ಮನೆಯಲ್ಲಿದ್ದ ಚಾಕುವಿನಿಂದ ಮೊದಲು ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿದ್ದ ಮೋಹನ್ ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ ಕಳುಹಿಸಿದ ವಿಡಿಯೋ ಗಮನಿಸಿದ ಸಂಬಂಧಿಕರು ಮನೆ ಬಳಿ ಧಾವಿಸಿ ಬಂದಿದ್ದಾರೆ. ಘಟನೆ ವೇಳೆ ಮನೆಯನ್ನು ಒಳಗಿನಿಂದ ಮೋಹನ್ ಲಾಕ್ ಮಾಡಿದ್ದ. ಸಂಬಂಧಿಕರು ಹಿಂಬಾಗಿಲಿನ ಮೂಲಕ ಒಳಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಇನ್ನೂ ಉಸಿರಾಡುತ್ತಿದ್ದುದನ್ನು ಗಮನಿಸಿ ಕೂಡಲೇ ಸಮೀಪದ ಎಲೈಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.