ಸಾರಾಂಶ
ನನ್ನ ಮೇಲೆ 1997ರಲ್ಲಿ ಚಿತ್ರವೊಂದರ ಶೂಟಿಂಗ್ ವೇಳೆ ನಿರ್ಮಾಪಕ ಮೋಹನನ್, ಪ್ರೊಡಕ್ಷನ್ ಮ್ಯಾನೇಜರ್ ಷಣ್ಮುಖನ್ ಮತ್ತು ಅವರ ಸ್ನೇಹಿತರಿಂದ ಗ್ಯಾಂಗ್‌ರೇಪ್‌ಗೆ ಯತ್ನ ನಡೆದಿತ್ತು ಎಂದು ಮಲಯಾಳಂ ಚಿತ್ರ ನಟಿ ಚರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.
ತಿರುವನಂತಪುರ : ನನ್ನ ಮೇಲೆ 1997ರಲ್ಲಿ ಚಿತ್ರವೊಂದರ ಶೂಟಿಂಗ್ ವೇಳೆ ನಿರ್ಮಾಪಕ ಮೋಹನನ್, ಪ್ರೊಡಕ್ಷನ್ ಮ್ಯಾನೇಜರ್ ಷಣ್ಮುಖನ್ ಮತ್ತು ಅವರ ಸ್ನೇಹಿತರಿಂದ ಗ್ಯಾಂಗ್‌ರೇಪ್‌ಗೆ ಯತ್ನ ನಡೆದಿತ್ತು ಎಂದು ಮಲಯಾಳಂ ಚಿತ್ರ ನಟಿ ಚರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ನಾನು ಉಳಿದುಕೊಂಡಿದ್ದ ಹೋಟೆಲ್‌ನ ರಿಸೆಪ್ಷನಿಸ್ಟ್ ಕೂಡಾ ಸಾಥ್ ನೀಡಿದ್ದರು,. ಆದರೆ ಅಂದು ನಾನು ಅದೃಷ್ಟವಶಾತ್ ಬಚಾವ್ ಆದರೆ. ಆದರೆ ಕಿರಿಯ ಕಲಾವಿದೆ ಮೇಲೆ ಗ್ಯಾಂಗ್‌ರೇಪ್ ಮಾಡಿದ್ದರು ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ದಿನ ದಿನಾ ಹೊಸ ಹೊಸ ಘಟನೆಗಳು ಬೆಳಕಿಗೆ ಬರುತ್ತಿದ್ದು ಸೆಕ್ಸ್ ಸ್ಕ್ಯಾಂಡಲ್ ದಂಧೆಯ ಕರಾಳಮುಖ ಬಯಲಾಗುತ್ತಿದೆ.