ಸಾರಾಂಶ
ಬೆಂಗಳೂರು : ನಗರದ ಹೊರಭಾಗದ ಹೊಸೂರು ರಸ್ತೆಯ ಎರಡು ಟೋಲ್ ಪ್ಲಾಜಾಗಳ ಮೂಲಕ ಸಂಚರಿಸುವ ವಾಹನಗಳು ಮಂಗಳವಾರದಿಂದ ಹೆಚ್ಚುವರಿ ಟೋಲ್ ದರ ಪಾವತಿಸಿ ಸಲ್ಲಿಸಬೇಕಿದೆ.
ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಸಂಸ್ಥೆಯ ನಿರ್ಧಾರದಂತೆ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾಗಳ ದಿನದ ಟೋಲ್ ದರ, ತಿಂಗಳ ಮತ್ತು ವಾರ್ಷಿಕ ಪಾಸ್ ದರ ಹೆಚ್ಚಿಸಲಾಗಿದೆ. ಅದರಂತೆ ದಿನದ ಟೋಲ್ ದರದಲ್ಲಿ ಕಾರು, ಜೀಪು, ಲಘು ವಾಹನ, ಭಾರೀ ವಾಹನಗಳ ಟೋಲ್ ದರ 5 ರು. ಹೆಚ್ಚಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾದಲ್ಲಿ ಕಾರು, ಜೀಪು, ಲಘು ವಾಹನಗಳ ಒಂದು ಪ್ರಯಾಣಕ್ಕೆ 60 ರು.ನಿಂದ 65 ರು.ಗೆ, ಎರಡು ಕಡೆಗಿನ ಪ್ರಯಾಣಕ್ಕೆ 85 ರು.ನಿಂದ 90 ರು., ಲಾರಿ, ಬಸ್‌ಗಳಿಗೆ ಒಂದು ಬದಿಗೆ 170 ರು.ನಿಂದ 175 ರು., ಮಲ್ಟಿ ಆ್ಯಕ್ಸಲ್ ವಾಹನಗಳಿಗೆ ಒಂದು ಬದಿಗೆ 345 ರು.ನಿಂದ 350 ರು. ದರ ನಿಗದಿ ಮಾಡಲಾಗಿದೆ.ಅತ್ತಿಬೆಲೆ ಟೋಲ್ ಪ್ಲಾಜಾದಲ್ಲಿ ಕಾರುಗಳು ಒಂದು ಪ್ರಯಾಣಕ್ಕೆ 35 ರು.ನಿಂದ 40 ರು., ಲಘು ವಾಹನ, ಮಿನಿ ಬಸ್‌ಗಳಿಗೆ 60 ರು.ನಿಂದ 65 ರು., ಟ್ರಕ್, ಬಸ್‌ಗಳಿಗೆ 120 ರು.ನಿಂದ 125 ರು.ಗೆ ಹೆಚ್ಚಿಸಲಾಗಿದೆ.- ಟ್ರಕ್, ಬಸ್ 125 (ಹಳೆ ಬೆಲೆ 120)..- ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260)..