ಸಾರಾಂಶ
ಕಳೆದ ಏ.16ರಂದು ಮೃತ ಕುಮಾರಸ್ವಾಮಿ ಬೆಂಗಳೂರಿನಿಂದ ಕೆಆರ್ ನಗರಕ್ಕೆ ತನ್ನ ಇಬ್ಬರು ಮಕ್ಕಳ ಜೊತೆ ಸ್ಯಾಂಟ್ರೋ ಕಾರಿನಲ್ಲಿ ಹೊರಟಿದ್ದರು. ಆದರೆ, ಊರಿಗೆ ತಲುಪಿರಲಿಲ್ಲ. ಇದಕ್ಕೂ ಮುನ್ನ ಮೊಬೈಲ್ ಕರೆ ಮಾಡಿ ಕೆಆರ್‌ಎಸ್‌ನಲ್ಲಿ ಇರುವುದಾಗಿ ಮನೆಯವರಿಗೆ ಹೇಳಿದ್ದರು. ತದ ನಂತರ ಅವರ ಸುಳಿವು ಸಿಕ್ಕಿರಲಿಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್ ಸಾಗರ ವ್ಯಾಪ್ತಿಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯಲ್ಲಿ ಮುಳುಗಿದ್ದ ಕಾರು ಸಹಿತ ತಂದೆ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಮಕ್ಕಳಾದ ಅದ್ಯೆತ್ (8) ಮತ್ತು ಅಕ್ಷತಾ (3) ಕಾರಿನ ಸಮೇತ ನಾಲೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.
ಕಳೆದ ಏ.16ರಂದು ಮೃತ ಕುಮಾರಸ್ವಾಮಿ ಬೆಂಗಳೂರಿನಿಂದ ಕೆಆರ್ ನಗರಕ್ಕೆ ತನ್ನ ಇಬ್ಬರು ಮಕ್ಕಳ ಜೊತೆ ಸ್ಯಾಂಟ್ರೋ ಕಾರಿನಲ್ಲಿ ಹೊರಟಿದ್ದರು. ಆದರೆ, ಊರಿಗೆ ತಲುಪಿರಲಿಲ್ಲ. ಇದಕ್ಕೂ ಮುನ್ನ ಮೊಬೈಲ್ ಕರೆ ಮಾಡಿ ಕೆಆರ್‌ಎಸ್‌ನಲ್ಲಿ ಇರುವುದಾಗಿ ಮನೆಯವರಿಗೆ ಹೇಳಿದ್ದರು. ತದ ನಂತರ ಅವರ ಸುಳಿವು ಸಿಕ್ಕಿರಲಿಲ್ಲ. ಈ ಸಂಬಂಧ ಮನೆಯವರು ಕೆಆರ್‌ಸಾಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ಕೃಷ್ಣರಾಜಸಾಗರದ ನಾರ್ತ್ ಬ್ಯಾಂಕ್ ಬಳಿ ಮಂಗಳವಾರ ಬೆಳಗ್ಗೆ ನಾಲೆಯಲ್ಲಿ ಕಾರು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನಾಲೆಗೆ ಇಳಿದು ಪರಿಶೀಲಿಸಿದಾಗ ಮೃತ ದೇಹಗಳು ಇರುವುದು ಕಂಡು ಬಂದಿದೆ. ಕಾರು ಮತ್ತು ಮೃತದೇಹಗಳನ್ನು ಮೇಲೆತ್ತಲಾಗಿದೆ. ಆದರೆ, ಕಾರು ನಾಲೆಗೆ ಹೇಗೆ ಉರುಳಿತು ಎಂಬ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳದಲ್ಲಿ ಮೃತರ ಕುಟುಂಬದ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡು, ತನಿಖೆ ಕೈಗೊಂಡಿದ್ದಾರೆ.ಅಪರಿಚಿತ ಶವ ಪತ್ತೆ
ಮಂಡ್ಯ: ನಗರದ ಕೆ.ಎಸ್.ಆರ್.ಸಿ.ಟಿ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ 35 ರಿಂದ 40 ವರ್ಷವಾಗಿದೆ. ತಲೆಯಲ್ಲಿ ಬಿಳಿ ಕಪ್ಪು ಬಣ್ಣದ ಕೂದಲು ಇದ್ದು, 5.2 ಅಡಿ ಎತ್ತರ, ಸಾಧರಣ ಮೈಕಟ್ಟು ಹೊಂದಿದ್ದಾರೆ. ಮೃತನು ನೀಲಿ, ಬಿಳಿ,ಕಪ್ಪು, ಹಸಿರು ಬಣ್ಣದ ಅರ್ಧ ತೋಳಿನ ಶರ್ಟ್, ಚೆಕ್ಸ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೂ-08232-224500/ 08232-224666/ 08232-22488 ಅನ್ನು ಸಂಪರ್ಕಿಸಲು ಮಂಡ್ಯ ಮಶ್ಚಿಮ ಠಾಣೆ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.ರಸ್ತೆ ಅಪಘಾತ ಅಪರಿಚಿತರು ಸಾವುಕೆ.ಆರ್.ಪೇಟೆತಾಲೂಕಿನ ದುಡುಕನಹಳ್ಳಿಯ ಅಕ್ಕಿಹೆಬ್ಬಾಳು - ಬೀರುವಳ್ಳಿ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಿಗೆ ಸುಮಾರು 35-40 ವರ್ಷವಾಗಿದೆ. ಒರ್ವ ವ್ಯಕ್ತಿ ಬಲಗೈನ ಮುಗೈ ಬಳಿಯಲ್ಲಿ ನಮ್ಮ ಅಜ್ಜಿ ಎಂದು ಹಚ್ಚೆ, ಎಡ ಹೆಬ್ಬೆರಳಿನಲ್ಲಿ ಓಂ ಎಂದು ಚಿನ್ಹೆ, ಎದೆಯ ಎರಡು ಕಡೆ ಹೃದಯದ ಹಚ್ಚೆ ಇದೆ. ಅದರಲ್ಲಿ ನಲ್ಲು ಎಂದು ಲಲಿತಾ ಎಂದು, ಪ್ರಿತ್ಸೆ ಎಂದು ಎಸ್.ಎನ್ ಎಂದು ಹಚ್ಚೆ, ಬಲಗೈನಲ್ಲಿ ಮೇರಿ ಎಂದು ಹಚ್ಚೆ ಇದೆ. ಮತ್ತೊರ್ವ ಮೃತ ವ್ಯಕ್ತಿ ನೋಡಲು ಟಿಬೇಟಿಯನ್ ತರ ಇದ್ದಾನೆ. ಮೃತ ವ್ಯಕ್ತಿಗಳ ವಾರಸುದಾರರು ಇದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.