ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಪ್ರಥಮ ದರ್ಜೆ ಸಹಾಯಕ ಸಂತೋಷ್ ಕುಮಾರ್ ವಿರುದ್ಧ ₹65 ಲಕ್ಷ ದುರ್ಬಳಕೆ ಪ್ರಕರಣ ಸಂಬಂಧ ಪೂರಕ ದಾಖಲೆಗಳ ಸಮೇತ ವರದಿ ನೀಡುವಂತೆ ಸದರಿ ಇಲಾಖೆಗೆ ವಿಧಾನಸೌಧ ಠಾಣೆ ಪೊಲೀಸರು ಸೂಚಿಸಿದ್ದಾರೆ.

 ಬೆಂಗಳೂರು : ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಪ್ರಥಮ ದರ್ಜೆ ಸಹಾಯಕ ಸಂತೋಷ್ ಕುಮಾರ್ ವಿರುದ್ಧ ₹65 ಲಕ್ಷ ದುರ್ಬಳಕೆ ಪ್ರಕರಣ ಸಂಬಂಧ ಪೂರಕ ದಾಖಲೆಗಳ ಸಮೇತ ವರದಿ ನೀಡುವಂತೆ ಸದರಿ ಇಲಾಖೆಗೆ ವಿಧಾನಸೌಧ ಠಾಣೆ ಪೊಲೀಸರು ಸೂಚಿಸಿದ್ದಾರೆ.

2007ರಿಂದ 2024ವರೆಗೆ ಡಿಸಿಆರ್‌ಇ ಘಟಕದ ಕೇಂದ್ರ ಕಚೇರಿಯ ಸಂಗ್ರಹ ಶಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಸಂತೋಷ್ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡಿಸಿಆರ್‌ಇ ಆಡಳಿತ ಅಧಿಕಾರಿ ಕಿರಣ್ ನೀಡಿದ ದೂರಿನ್ವಯ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಿ ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂತೋಷ್ ವಿರುದ್ಧ ಹಣ ದುರ್ಬಳಕೆ ಪ್ರಕರಣ ಸಂಬಂಧ ಪೂರಕ ದಾಖಲೆಗಳೊಂದಿಗೆ ಹಣ ವಹಿವಾಟಿನ ಬಗ್ಗೆ ಸವಿಸ್ತಾರ ವರದಿ ಸಲ್ಲಿಸುವಂತೆ ಡಿಸಿಆರ್‌ಇಗೆ ಹೇಳಿದ್ದೇವೆ. ವರದಿ ಕೊಡಲು ಅಧಿಕಾರಿಗಳು ಸಮಯ ಕೋರಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.