ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಕೆಳಗೆ ಆಡಗಿದ್ದ ನಾಗರ : ಪಕ್ಕದ ವಾಹನ ಸವಾರನಿಗೆ ಕಂಡ ಹಾವು

| N/A | Published : Apr 18 2025, 01:48 AM IST / Updated: Apr 18 2025, 04:16 AM IST

ಸಾರಾಂಶ

ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಅಡಿ ಅಡಗಿದ್ದ ಹಾವನ್ನು ಗಮನಿಸದೆ ಬೈಕ್‌ ಓಡಿಸುತ್ತಿದ್ದ ಸವಾರ. ಪಕ್ಕದ ಬೈಕ್‌ ಓಡಿಸುತ್ತಿದ್ದವನಿಂದ ಮಾಹಿತಿ.

ಆನೇಕಲ್: ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಕೆಳಗೆ ಹಾವೊಂದು ಅಡಗಿದ್ದ ಘಟನೆ ಆನೇಕಲ್ ತಾಲೂಕು ಬ್ಯಾಗದದೇನಹಳ್ಳಿ ಗೇಟ್ ಬಳಿ ವರದಿಯಾಗಿದೆ.

ಪಲ್ಸರ್ ಬೈಕ್‌ನಲ್ಲಿ ಓರ್ವ ಹೋಗುತ್ತಿದ್ದಾಗ ಪಕ್ಕದ ವಾಹನ ಸವಾರನಿಗೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಕೆಳ ಭಾಗದಿಂದ ಹಾವೊಂದು ತಲೆ ಹೊರಗೆ ಹಾಕಿರುವುದು ಕಂಡಿದೆ. ಕೂಡಲೇ ಆತ ಬೈಕ್ ಸವಾರನಿಗೆ ಹಾವು ಇರುವ ಬಗ್ಗೆ ಪಲ್ಸರ್‌ ಬೈಕ್‌ ಸವಾರನಿಗೆ ತಿಳಿಸಿದ್ದಾರೆ. 

ಗಾಬರಿಗೊಂಡ ಬೈಕ್ ಮಾಲೀಕ ನಾಗೇಂದ್ರ ನಿಧಾನವಾಗಿ ಬೈಕನ್ನು ರಸ್ತೆಯ ಬದಿಗೆ ಸರಿಸಿ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದಾನೆ. ನೋಡಲಾಗಿ ಹಾವು ಒಳಗೆ ಸರಿದು ಮುದುಡಿಕೊಂಡಿದೆ. ಹಾವನ್ನು ಹೇಗಾದರೂ ಓಡಿಸಬೇಕೆಂದುಕೊಂಡು ಬೈಕ್ ಸ್ಟಾರ್ಟ್ ಮಾಡಿ ಬೆದರಿಸಲು ಮಾಡಿದ ಯತ್ನ ವಿಫಲವಾಗಿದೆ. ನಂತರ ಸಮೀಪದ ವಾಟರ್ ವಾಷ್ ಅಂಗಡಿಗೆ ತೆರಳಿ ಸೀಟ್ ಕಳಚಿ ನೀರನ್ನು ಬಿಟ್ಟಿದ್ದಾರೆ. ಆಗಲೂ ನಾಗಪ್ಪ ಬೈಕ್‌ನಿಂದ ಇಳಿಯಲಿಲ್ಲ. ಕೂಡಲೇ ಉರಗ ತಜ್ಞ ರಮೇಶ್ ಅವರಿಗೆ ಕರೆ ಮಾಡಿ ಕರೆಸಿದ್ದಾರೆ. ಸತತ 2 ಗಂಟೆಗಳ ಪ್ರಯತ್ನದ ನಂತರ ಹಾವನ್ನು ಸೆರೆ ಹಿಡಿದು ದೂರದ ಕಾಡಿನಲ್ಲಿ ಬಿಟ್ಟಿದ್ದಾರೆ. ಬೈಕ್ ಸವಾರ ಹಾಗೂ ಕುತೂಹಲದಿಂದ ಜಮಾಯಿಸಿದ ಜನ ನೆಮ್ಮದಿಯ ಉಸಿರು ಬಿಡುವಂತಾಗಿದೆ.