ಸಾರಾಂಶ
ಅಡ್ಡ ಬಂದ ನಾಯಿ: ಮರಕ್ಕೆ ಡಿಕ್ಕಿಯಾಗಿ ಕಾರು ಚಾಲಕ ಸಾವುಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜವರೇಗೌಡರ ಪುತ್ರ ಎ.ಜೆ.ರವಿಕುಮಾರ್ ಮೃತ ವ್ಯಕ್ತಿ
ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜವರೇಗೌಡರ ಪುತ್ರ ಎ.ಜೆ.ರವಿಕುಮಾರ್ ಮೃತ ವ್ಯಕ್ತಿಕನ್ನಡಪ್ರಭ ವಾರ್ತೆ ಕಿಕ್ಕೇರಿಅಡ್ಡ ಬಂದ ನಾಯಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಸಮೀಪದ ಗಾಂಧಿನಗರದ ಬಳಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜವರೇಗೌಡರ ಪುತ್ರ ಎ.ಜೆ.ರವಿಕುಮಾರ್ (25) ಮೃತ ವ್ಯಕ್ತಿ.ರವಿಕುಮಾರ್ ಟಾಟಾ ಕಂಪನಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಯಿಂದ ವೈದ್ಯರನ್ನು ಕರೆತಂದು ಗಾಂಧಿನಗರ ಆಸ್ಪತ್ರೆ ಬಿಟ್ಟು ಔಷಧ ತರಲು ಕಿಕ್ಕೇರಿಗೆ ತೆರಳಿದ್ದನು.
ಔಷಧ ತೆಗೆದುಕೊಂಡು ಗಾಂಧಿನಗರ ಬಳಿ ತೆರಳುತ್ತಿದ್ದಾಗ ಆಸ್ಪತ್ರೆ ಬಳಿ ನಾಯಿ ರಸ್ತೆಗೆ ಅಡ್ಡಲಾಗಿ ಬಂದಿದೆ. ಅಡ್ಡಲಾದ ನಾಯಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿಯಾಗಿದೆ. ಇದರಿಂದ ರವಿಕುಮಾರ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.ಮೃತನ ತಂದೆ ಜವರೇಗೌಡ ಟಾಟಾ ಕಂಪನಿ ಮಾಲೀಕರಿಂದ ಪರಿಹಾರ ಕೊಡಿಸಲು ದೂರು ನೀಡಿದ್ದಾರೆ. ಪ್ರಕರಣವನ್ನು ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪಂಚಾನಾಮೆ ನಡೆಸಿ ಮೃತರ ವಾರಸುದಾರರಿಗೆ ದೇಹ ಹಸ್ತಾಂತರಿಸಲಾಯಿತು.