ಸಾರಾಂಶ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬೆನ್ನುಹುರಿ ಹಾಗೂ ಕಾಲಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಶುಕ್ರವಾರ ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬೆನ್ನುಹುರಿ ಹಾಗೂ ಕಾಲಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಶುಕ್ರವಾರ ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಕೋರ್ಟ್‌ನಿಂದ 6 ವಾರಗಳ ಕಾಲ ಜಾಮೀನು ಪಡೆದು ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಮೊನ್ನೆ ಬಳ್ಳಾರಿ ಜೈಲಿನಿಂದ ಕುಂಟುತ್ತಾ ಬೆನ್ನು ನೋವಿನಿಂದ ಬಳಲುತ್ತಾ ಹೊರಬಂದ ದರ್ಶನ್‌ನನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಇದಾದ ನಂತರ ನಿನ್ನೆ ದರ್ಶನ್ ತಮ್ಮ ಪುತ್ರ ವಿನೀಶ್ ಅವರ ಬರ್ತಡೇ ಅನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಜೊತೆಗೆ, ದರ್ಶನ ಅವರ ಎಲ್ಲ ದುಬಾರಿ ಕಾರುಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ವಚ್ಛಗೊಳಿಸಿ ಪೂಜೆ ಮಾಡಲಾಯಿತು. ಇದಾದ ನಂತರ ಇಂದು ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದರು.
ಇದರ ಬೆನ್ನಲ್ಲಿಯೇ ನಟ ದರ್ಶನ್ ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದಾಗಿ ಕರೆ ಮಾಡಿ ಮಾಹಿತಿ ನೀಡಿದ್ದರಂತೆ. ಶುಕ್ರವಾರ ಮಾಧ್ಯಾಹ್ನ 1 ಗಂಟೆ ಒಳಗಾಗಿ ಆಸ್ಪತ್ರೆಗೆ ಬರುವುದಾಗಿ ಯೂ ತಿಳಿಸಿದ್ದರಂತೆ. ಆದರೆ, ಕೊನೇ ಕ್ಷಣದಲ್ಲಿ ಮನೆಯಲ್ಲಿ ನಿರ್ಧಾರ ಬದಲಿಸಿದ್ದಾರೆ. ಬೆನ್ನು ನೋವಿಗೆ ನೇರವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ಮೊದಲು ತಪಾಸಣೆ ಮಾಡಿಸಿಕೊಂಡು ಫಿಸಿಯೋಥೆರಫಿ ಸೇರಿದಂತೆ ಇತರೆ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸಬಹುದೇ ಎಂಬುದನ್ನು ಪ್ರಯತ್ನಿಸುತ್ತಾರೆ.
ಯಾವ್ಯಾವ ಪರೀಕ್ಷೆ ಮಾಡಿಸುತ್ತಾರೆ ದರ್ಶನ್: ನಟ ದರ್ಶನ್ ಮಧ್ಯಾಹ್ನ 2.30ರ ನಂತರ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಇಂದು ಹಲವು ವೈದ್ಯಕೀಯ ಪರೀಕ್ಷೆ ನಡೆಸಿ ನಾಳೆಯೊಳಗೆ ದರ್ಶನ್ ಕುಟುಂಬಸ್ಥರಿಗೆ ವರದಿಯನ್ನು ನೀಡಲಾಗುತ್ತದೆ. ದರ್ಶನ್ ಗೆ ತೀವ್ರ ಬೆನ್ನುನೋವು ಕಾಡ್ತಿರೋ ಹಿನ್ನೆಲೆಯಲ್ಲಿ ಇಂದು ಇಸಿಜಿ, ಸ್ಕ್ಯಾನಿಂಗ್, ಬಿಪಿ, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ ಟೆಸ್ಟ್ (LFT) ಪರೀಕ್ಷೆಗಳನ್ನು ಮಾಡಿಸುವ ಸಾಧ್ಯತೆಯಿದೆ. ಮೊದಲಿಗೆ ಫಿಸಿಯೋಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಲಾಗಿದೆ. ಫಿಸಿಯೋ ಥೆರಪಿಯಲ್ಲಿ ಬೆನ್ನುನೋವು ಗುಣವಾಗದಿದ್ದಲ್ಲಿ ಸರ್ಜರಿಗೆ ಕೊನೆ ಆಯ್ಕೆಯನ್ನು ಇಟ್ಟುಕೊಳ್ಳಲಾಗಿದೆ.