ಹುಣಸೂರು ತಾಲೂಕಿನ ಮುಳ್ಳೂರು ಗ್ರಾಪಂಪಿಡಿಒ ಮಂಜುಳಾ ಲೋಕಾ ಬಲೆಗೆ ಬಿದ್ದವರು. ಈ ವೇಳೆ ತಮ್ಮ ಕೈ ಕೊಯ್ದುಕೊಂಡ ಪರಿಣಾಮ ನೋಟಿನ ಕಂತೆ ಮೇಲೆ ರಕ್ತ ಬಿದ್ದಿದೆ. ನಂತರ ಪಿಡಿಒ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಲಾಯಿತು.
ಕನ್ನಡಪ್ರಭ ವಾರ್ತೆ ಹುಣಸೂರು
ಗ್ರಾಪಂ ಕರ್ತವ್ಯ ನಿರ್ವಹಿಸುತ್ತಿದ್ದ ನೀರುಗಂಟಿಯ ಹುದ್ದೆ ಕಾಯಂ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಮುಳ್ಳೂರು ಗ್ರಾ.ಪಂಪಿಡಿಒ ಮಂಜುಳಾ ಲೋಕಾಬಲೆಗೆ ಬಿದ್ದವರು.ಗ್ರಾಪಂನಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಯ್ಯ ಕಾಯಂ ಮಾತಿಗೆ 25 ಸಾವಿರ ರು. ಲಂಚ ಬೇಡಿಕೆ ಇಟ್ಟಿದ್ದಾರೆಂದು ನೀಡಿದ ದೂರಿನನ್ವಯ ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ
ಲಂಚ ನೀಡುವ ವೇಳೆ ಧಾವಿಸಿ ಟ್ರ್ಯಾಪ್ ಮಾಡಿದ್ದಾರೆ. ಈ ವೇಳೆ ಮಂಜುಳ ತಮ್ಮ ಕೈ ಕೊಯ್ದುಕೊಂಡ ಪರಿಣಾಮ ನೋಟಿನ ಕಂತೆ ಮೇಲೆ ರಕ್ತ ಬಿದ್ದಿದೆ. ನಂತರ ಪಿಡಿಒ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಲಾಯಿತು.ಇತ್ತೀಚೆಗೆ ರಾಜ್ಯ ಸರ್ಕಾರ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರುಗಂಟಿಗಳನ್ನು ಕಾಯಂ ಮಾಡಲು ಆದೇಶಿಸಿರುವುದನ್ನು ಸ್ಮರಿಸಬಹುದು.ಮಾದಕ ವಸ್ತು ಹೊಂದಿದ್ದ ಐವರ ಬಂಧನ- 12.65 ಲಕ್ಷ ಮೌಲ್ಯದ ಮಾದಕ ವಸ್ತು ವಶ
ಕನ್ನಡಪ್ರಭ ವಾರ್ತೆ ಮೈಸೂರುಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಹೊಂದಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, 12.65 ಲಕ್ಷ ರು. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ಮೊದಲನೇ ಪ್ರಕರಣದಲ್ಲಿ ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 8.65 ಲಕ್ಷ ರು. ಮೌಲ್ಯದ 5 ಕೆ.ಜಿ 369 ಗ್ರಾಂ ಗಾಂಜಾ ಹಾಗೂ ವಾಹನವನ್ನು ವಶಕ್ಕೆ ಪಡೆದಿರುತ್ತಾರೆ. ಅಮ್ಜದ್ ಪಾಷ, ಜಿಯಾ ಖಾನ್, ಮಹಮ್ಮದ್ ಸಕ್ಲೆನ್, ಸೈಯದ್ ಬೇಗ್ ಬಂಧಿತ ಆರೋಪಿಗಳು.
ಎರಡನೇ ಪ್ರಕರಣದಲ್ಲಿ ಕುವೆಂಪುನಗರ ಠಾಣೆಯ ಪೊಲೀಸರು ದಟ್ಟಗಳ್ಳಿಯ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 4 ಲಕ್ಷ ರು. ಮೌಲ್ಯದ 40 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.ಕೇರಳ ರಾಜ್ಯ ಕಾಸರಗೂಡು ಜಿಲ್ಲೆಯ ಹೊಸದುರ್ಗದ ಬಲ್ಲಾ ಗ್ರಾಮದ ಶಬೀರ್ ಬಂಧಿತ ಆರೋಪಿ. ಈತನ ವಿರುದ್ಧ ಕಾಸರಗೂಡು ಜಿಲ್ಲೆಯ ಹೊಸದುರ್ಗ ಠಾಣೆಯಲ್ಲಿ 1 ದರೋಡೆ ಪ್ರಕರಣ, ಬೆಂಗಳೂರು ಬಾಣಸವಾಡಿ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯಿದೆಯಡಿ 1 ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.