ಕುಡಿದ ಅಮಲಿನಲ್ಲಿ ಶಾಲಾ ವಾಹನ ಅಡ್ಡಗಟ್ಟಿ ಬಾಲಕಿಯರಿಗೆ ಹಿಂಸೆ ನೀಡಿದ್ದ ಕಿಡಿಗೇಡಿಗಳನ್ನು ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಖಾಸಗಿ ಶಾಲೆ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿಯ ಗಿರೀಶ ಮತ್ತು ಕಿರಣ್ ಬಂಧಿತರು.

ಕಿಕ್ಕೇರಿ:

ಕುಡಿದ ಅಮಲಿನಲ್ಲಿ ಶಾಲಾ ವಾಹನ ಅಡ್ಡಗಟ್ಟಿ ಬಾಲಕಿಯರಿಗೆ ಹಿಂಸೆ ನೀಡಿದ್ದ ಕಿಡಿಗೇಡಿಗಳನ್ನು ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಖಾಸಗಿ ಶಾಲೆ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿಯ ಗಿರೀಶ (21) ಮತ್ತು ಕಿರಣ್(20) ಬಂಧಿತರು.

ಖಾಸಗಿ ಶಾಲೆಯಿಂದ ಮಕ್ಕಳನ್ನು ಎಂದಿನಂತೆ ಸೋಮವಾರ ಸಂಜೆ ವಾಹನಗಳಲ್ಲಿ ವಾಪಸ್ ಕರೆದುಕೊಂಡು ಹೋಗುತ್ತಿರುವಾಗ ಬಸವನಹಳ್ಳಿ ಮಾರ್ಗವಾಗಿ ವಡ್ಡರಹಳ್ಳಿಯಲ್ಲಿ ಇಬ್ಬರು ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ವಾಹನ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ವಾಹನದಿಂದ ಕೆಳಗಿಳಿಸಲು ಚಾಲಕನಿಗೆ ಧಮಕಿ ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಘಟನೆ ನಂತರ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಶಾಲಾ ಆಡಳಿತ ಮಂಡಳಿಯವರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.