ಸಾರಾಂಶ
ಶ್ರೀರಂಗಪಟ್ಟಣ : ಹಾಡಹಗಲೇ ಮನೆ ಬಾಗಿಲು ಮುರಿದು ನಗದು ಸೇರಿದಂತೆ ಲಕ್ಷಾಂತರ ರು. ಬೆಲೆ ಬಾಳುವ ಬೆಳ್ಳಿ ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂನಲ್ಲಿ ನಡೆದಿದೆ.
ಗ್ರಾಮದ ನಾರಾಯಣಪ್ಪರ ಮನೆಯಲ್ಲಿ ಯಾರು ಇಲ್ಲದ ವೇಳೆ ಮೂವರು ದುಷ್ಕರ್ಮಿಗಳಿಂದ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ. ದೇವರ ಮನೆಯಲ್ಲಿದ್ದ 1 ಕೆಜಿಗೂ ಹೆಚ್ಚು ಬೆಳ್ಳಿ ಪದಾರ್ಥ ಸೇರಿದಂತೆ 1 ಲಕ್ಷ ರು. ನಗದು ಕಳ್ಳತನವಾಗಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಮೂವರು ಅಪರಿಚಿತರಿಂದ ಕೃತ್ಯ ನಡೆದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೃದಯಾಘಾತದಿಂದ ವ್ಯಕ್ತಿ ಸಾವು
ಮಳವಳ್ಳಿ: ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಅಟ್ಟುವನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಪುಟ್ಟಸ್ವಾಮಿ (55) ಮೃತ ವ್ಯಕ್ತಿ. ಜಮೀನಿನಿಂದ ಮೇಕೆಗಳಿಗೆ ಮೇವು ತಂದ ಪುಟ್ಟಸ್ವಾಮಿ ಅವರು ಕುಡಿಯಲು ಬಿಸಿ ನೀರು ಕೇಳಿದ್ದಾನೆ. ನಂತರ ನೀರು ಕುಡಿಯುವಾಗಲೇ ಕುಸಿದು ಬಿದ್ದಿದ್ದಾರೆ. ನಂತರ ಕುಟುಂಬಸ್ಥರು ಪುಟ್ಟಸ್ವಾಮಿಯನ್ನು ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ. ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.